ವಾಣಿವಿಲಾಸ ಸಾಗರ ಜಲಾಶಯ (ಮಾರಿಕಣಿವೆ ಜಲಾಶಯ)ವು ಕರ್ನಾಟಕ ರಾಜ್ಯದ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನಲ್ಲಿರುವ ಪ್ರಮುಖ ಜಲಾಶಯ ಹಾಗೂ ಅಣೆಕಟ್ಟಾಗಿದೆ. ಈ ಅಣೆಕಟ್ಟನ್ನು ವೇದಾವತಿ ನದಿಗೆ ಅಡ್ಡಲಾಗಿ, ಮೈಸೂರು ಮಹಾರಾಜರ ಆಡಳಿತಾವಧಿಯಲ್ಲಿ ಸ್ವಾತಂತ್ರ್ಯಪೂರ್ವ ಕಾಲದಲ್ಲೇ ನಿರ್ಮಿಸಲಾಯಿತು.
ವಾಣಿವಿಲಾಸ ಸಾಗರ ಜಲಾಶಯದ ದೂರಗಳು
- ಬೆಂಗಳೂರು – 181 ಕಿ.ಮೀ
- ಚಿತ್ರದುರ್ಗ – 56 ಕಿ.ಮೀ
- ಹಿರಿಯೂರು – 23 ಕಿ.ಮೀ
- ಚಿತ್ರದುರ್ಗ ರೈಲ್ವೆ ನಿಲ್ದಾಣ – 60 ಕಿ.ಮೀ
ಈ ಅಣೆಕಟ್ಟಿನ ಪ್ರಮುಖ ವಿಶೇಷತೆಯೆಂದರೆ, ಇದರ ನಿರ್ಮಾಣದಲ್ಲಿ ಸಿಮೆಂಟ್ ಬಳಸದೆ ಕೇವಲ ಸುಣ್ಣದ ಗಾರೆ ಹಾಗೂ ಸಾಂಪ್ರದಾಯಿಕ ನಿರ್ಮಾಣ ಸಾಮಗ್ರಿಗಳನ್ನು ಬಳಸಲಾಗಿದೆ. ಆ ಕಾಲದ ಇಂಜಿನಿಯರಿಂಗ್ ಕೌಶಲ್ಯ ಮತ್ತು ಶಿಲ್ಪಕಲೆಯ ಅದ್ಭುತ ನಿದರ್ಶನವಾಗಿರುವ ಈ ಅಣೆಕಟ್ಟು, ಶತಮಾನಕ್ಕೂ ಹೆಚ್ಚು ಕಾಲ ಕಳೆದಿದ್ದರೂ ಇಂದಿಗೂ ಭದ್ರವಾಗಿ ಮತ್ತು ಅಚ್ಚುಕಟ್ಟಾಗಿ ಉಳಿದು ನಿಂತಿದೆ.
ಈ ಜಲಾಶಯವನ್ನು ಮಾರಿಕಣಿವೆ ಜಲಾಶಯ ಎಂದೂ ಕರೆಯಲಾಗುತ್ತದೆ. ಇದು ಸುತ್ತಮುತ್ತಲಿನ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವುದರ ಜೊತೆಗೆ, ಹಿರಿಯೂರು ಮತ್ತು ಚಿತ್ರದುರ್ಗ ನಗರಗಳಿಗೆ ಪ್ರಮುಖ ಕುಡಿಯುವ ನೀರಿನ ಮೂಲವಾಗಿದೆ. ಇದರ ನೈಸರ್ಗಿಕ ಸೌಂದರ್ಯ ಮತ್ತು ವಿಶಾಲ ಜಲರಾಶಿಯಿಂದಾಗಿ ಇದು ಪ್ರವಾಸಿಗರ ಪ್ರಮುಖ ಆಕರ್ಷಣೆಯ ಕೇಂದ್ರವಾಗಿಯೂ ಪ್ರಸಿದ್ಧವಾಗಿದೆ.
ಈ ಅಣೆಕಟ್ಟಿನಿಂದ ಹೊರಡುವ ಎಡದಂಡೆ ಮತ್ತು ಬಲದಂಡೆ ಕಾಲುವೆಗಳ ಮೂಲಕ ಚಳ್ಳಕೆರೆ ತಾಲ್ಲೂಕಿನ ಸೇರಿದಂತೆ ಸುತ್ತಮುತ್ತಲಿನ ಕೃಷಿ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಒದಗಿಸಲಾಗುತ್ತದೆ. ಇದರ ಪರಿಣಾಮವಾಗಿ ಸುಮಾರು 100 ಚದರ ಕಿಲೋಮೀಟರ್ಗಿಂತಲೂ ಹೆಚ್ಚು ಪ್ರದೇಶವು ಕೃಷಿ ನೀರಾವರಿಯ ಪ್ರಯೋಜನ ಪಡೆಯುತ್ತದೆ.
ಭೇಟಿ ನೀಡಿ









