ಗಾಯತ್ರಿ ಜಲಾಶಯವು ಕರ್ನಾಟಕ ರಾಜ್ಯದ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನಲ್ಲಿರುವ ಪ್ರಮುಖ ಜಲಾಶಯ ಹಾಗೂ ಅಣೆಕಟ್ಟಾಗಿದೆ. ಈ ಅಣೆಕಟ್ಟನ್ನು ಸುವರ್ಣಮುಖಿ ನದಿಗೆ ಅಡ್ಡಲಾಗಿ, ಮೈಸೂರು ರಾಜ್ಯದ ಮಹಾರಾಜ ಜಯಚಾಮರಾಜ ಒಡೆಯರ್ ಅವರ ಕಾಲದಲ್ಲಿ ನಿರ್ಮಿಸಲಾಯಿತು. 1951ರಲ್ಲಿ ಮೈಸೂರು ರಾಜರು ಇದರ ಶಿಲಾನ್ಯಾಸ ನೆರವೇರಿಸಿದರು ಮತ್ತು 1963ರಲ್ಲಿ ಕಾಮಗಾರಿ ಪೂರ್ಣಗೊಂಡಿತ್ತು.
ಗಾಯತ್ರಿ ಜಲಾಶಯವು ಹಿರಿಯೂರು ಹಾಗೂ ಶಿರಾ ತಾಲೂಕಿನ ಸುತ್ತಮುತ್ತಲಿನ ಸುಮಾರು 7,000 ಹೆಕ್ಟೇರ್ ಭೂಮಿಗೆ ನೀರಾವರಿ ಸೌಲಭ್ಯ ಒದಗಿಸುವುದರ ಜೊತೆಗೆ, ಸ್ಥಳೀಯರ ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸುತ್ತದೆ. ಕೃಷಿ ಮತ್ತು ದೈನಂದಿನ ಬದುಕಿಗೆ ನೆರವಾಗುವುದರೊಂದಿಗೆ, ಈ ಜಲಾಶಯವು ತನ್ನ ಸುಂದರ ಪರಿಸರ, ಹಸಿರು ಸುತ್ತಮುತ್ತಲಿನ ನೈಸರ್ಗಿಕ ಸೌಂದರ್ಯ ಮತ್ತು ಶಾಂತ ವಾತಾವರಣದಿಂದ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿಯೂ ಪ್ರಸಿದ್ಧಿ ಪಡೆದಿದೆ.
ಈ ಜಲಾಶಯವು ಬೆಂಗಳೂರು ನಿಂದ 150 ಕಿ.ಮೀ ದೂರದಲ್ಲಿದೆ ಮತ್ತು ಚಿತ್ರದುರ್ಗದಿಂದ 65 ಕಿ.ಮೀ ದೂರದಲ್ಲಿದೆ. ಹಾಗೂ ಹಿರಿಯೂರು ಪಟ್ಟಣದಿಂದ 24 ಕಿ.ಮೀ ಮತ್ತು ಚಿತ್ರದುರ್ಗ ನಗರ ರೈಲ್ವೆ ನಿಲ್ದಾಣದಿಂದ ಕೇವಲ 68 ಕಿ.ಮೀ ದೂರದಲ್ಲಿದೆ.
ಈ ಜಲಾಶಯವು ಹತ್ತಿರದ ಹಳ್ಳಿಗಳಿಗೆ ನೀರನ್ನು ಒದಗಿಸುತ್ತದೆ. ಈ ಜಲಾಶಯವು ಜನಪ್ರಿಯ ಪಿಕ್ನಿಕ್ ತಾಣವಾಗಿದ್ದು, ಪ್ರವಾಸಿಗರು, ವಿಶೇಷವಾಗಿ ವಾರಾಂತ್ಯದಲ್ಲಿ ಭೇಟಿ ನೀಡುತ್ತಾರೆ. ಪ್ರೀತಿಪಾತ್ರರೊಂದಿಗೆ ಭೇಟಿ ನೀಡಲು ಇದು ಶಾಂತ ಸ್ಥಳವಾಗಿದೆ. ಈ ಪ್ರದೇಶವು ಸೈಕ್ಲಿಂಗ್‌ಗೆ ಸೂಕ್ತವಾಗಿದೆ.
ಭೇಟಿ ನೀಡಿ