ಮಾಕಳಿದುರ್ಗ

ಮಾಕಳಿದುರ್ಗವು ಕರ್ನಾಟಕ ರಾಜ್ಯದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಹತ್ತಿರ ಇರುವ ಒಂದು ಬೆಟ್ಟವಾಗಿದೆ. ಈ ಬೆಟ್ಟವು ಸಮುದ್ರ ಮಟ್ಟದಿಂದ ಸುಮಾರು 4432 ಅಡಿ ಎತ್ತರದಲ್ಲಿ ಇದ್ದು, ಅದರ ಶಿಖರದ ತುದಿಯಲ್ಲಿ ಕೋಟೆಯನ್ನು ಹೊಂದಿದೆ. ಕೋಟೆಯ ಗೋಡೆಗಳಿಂದ ಆವೃತವಾಗಿರುವ ಮೇಲ್ಭಾಗದಲ್ಲಿರುವ ಮಾಕಳಿ ಮಲ್ಲೇಶ್ವರ ದೇವಸ್ಥಾನವು ಚಾರಣದ ಪ್ರಮುಖ ಅಕರ್ಷಣೇಯಾಗಿದೆ. ಇಲ್ಲಿ ಪುರಾತನ ದೇವಾಲಯವು ಶಿವ ಮತ್ತು ನಂದಿಯ ವಿಗ್ರಹಗಳನ್ನು ಹೊಂದಿದೆ ಮತ್ತು ಈಗಲೂ ಹತ್ತಿರದ ಹಳ್ಳಿಗಳಿಂದ ಭಕ್ತರನ್ನು ಆಕರ್ಷಿಸುತ್ತದೆ.

ಮಾಕಳಿದುರ್ಗದ ದೂರಗಳು

  • ಬೆಂಗಳೂರು – 58 ಕಿ.ಮೀ
  • ದೊಡ್ಡಬಳ್ಳಾಪುರ – 7 ಕಿ.ಮೀ
  • ಘಾಟಿ ಸುಬ್ರಹ್ಮಣ್ಯ – 5 ಕಿ.ಮೀ
  • ಮಾಕಳಿದುರ್ಗ (MKL) ರೈಲು ನಿಲ್ದಾಣ – 4 ಕಿ.ಮೀ

ಮಾಕಳಿದುರ್ಗದ ಚಾರಣವು ಕಷ್ಟಕರವಾಗಿದೆ. ಇದು ಕೆಲವು ಕಲ್ಲಿನ ಭಾಗಗಳು ಮತ್ತು ಕಡಿದಾದ ವಿಭಾಗಗಳನ್ನು ಹೊಂದಿರುವ, ಉತ್ತಮವಾಗಿ ಗುರುತಿಸಲಾದ ಜಾಡುಗಳನ್ನು ಒಳಗೊಂಡಿದೆ.

ಮಾಕಳಿದುರ್ಗದ ಬೆಟ್ಟವನ್ನು ಹೇಗೆ ತಲುಪಬಹುದು?

ಈ ಸ್ಥಳವು ಮಾಕಳಿದುರ್ಗ (MKL) ರೈಲು ನಿಲ್ದಾಣದಿಂದ 3.2 ಕಿ.ಮೀ ದೂರದ ಮಾರ್ಗವಾಗಿದೆ. ರೈಲು ನಿಲ್ದಾಣದಿಂದ ಮುತ್ತುರಾಯಸ್ವಾಮಿ ದೇವಸ್ಥಾನಕ್ಕೆ 2.2 ಕಿ.ಮೀ ಕ್ರಮಿಸಿ, ನಂತರ ಮುತ್ತುರಾಯಸ್ವಾಮಿ ದೇವಸ್ಥಾನದಿಂದ ರೆಸ್ಟ್ ಪಾಯಿಂಟ್‌ವರೆಗೆ 1 ಕಿ.ಮೀ ಚಾರಣ ಕೈಗೊಳ್ಳಬೇಕು. ಪ್ರಾರಂಭದ ಬಿಂದುವಿನಿಂದ ಶಿಖರವನ್ನು ತಲುಪಲು ಸುಮಾರು 2.30 ಗಂಟೆಗಳು ಬೇಕಾಗುತ್ತದೆ ಮತ್ತು ಇಳಿಯಲು ಸುಮಾರು ಎರಡು ಗಂಟೆಗಳನ್ನು ತೆಗೆದುಕೊಳ್ಳುತ್ತದೆ.

ನೀವು ಪಾರ್ಕಿಂಗ್ ಸ್ಥಳದವರೆಗೆ ರಸ್ತೆಯ ಮೂಲಕ ಬರುತ್ತಿದ್ದರೆ, ರಾಜ್ಯ ಹೆದ್ದಾರಿ 9 ರಿಂದ ನಿಮ್ಮ ಎಡಭಾಗದಲ್ಲಿ ಕರ್ನಾಟಕ ಅರಣ್ಯ ಇಲಾಖೆಯ ಒಂದು ದೊಡ್ಡ ಫಲಕ (ಸೈನ್‌ಬೋರ್ಡ್) ಕಾಣಿಸುತ್ತದೆ. ಆ ಫಲಕದ ಬಳಿ ಟ್ರ್ಯಾಕ್‌ನಲ್ಲಿ ಎಡಕ್ಕೆ ತಿರುಗಿ ಹೋಗಬೇಕು. ಸುಮಾರು 900 ಮೀಟರ್ ವಾಹನದಲ್ಲಿ ಚಲಿಸಿದ ನಂತರ ನೀವು ತೆರೆದ ಸ್ಥಳವನ್ನು ಕಾಣುತ್ತೀರಿ ಅದು ಪಾರ್ಕಿಂಗ್ ಸ್ಥಳವಾಗಿದೆ. ನಿಮ್ಮ ವಾಹನಗಳನ್ನು ಅಲ್ಲಿ ನಿಲ್ಲಿಸಿ, ಕರ್ನಾಟಕ ಅರಣ್ಯ ಇಲಾಖೆಯ ಸೈನ್‌ಬೋರ್ಡ್ ಹೊಂದಿರುವ ಟ್ರೈಲ್‌ನ ಇನ್ನೊಂದು ಬದಿಗೆ ರೈಲು ಮಾರ್ಗವನ್ನು ದಾಟಬೇಕು.

ಸುಮಾರು 100 ಮೀಟರ್ ದೂರದಲ್ಲಿ ನಿಮ್ಮ ಬಲಭಾಗದಲ್ಲಿ ಮುತ್ತುರಾಯಸ್ವಾಮಿ ದೇವಸ್ಥಾನವನ್ನು ಕಾಣಬಹುದು. ಇಲ್ಲಿಂದ ನೀವು 1 ಕಿ.ಮೀ ಚಾರಣ ಕೈಗೊಳ್ಳಬೇಕು. ನೇರವಾಗಿ ಮುಂದಿರುವ ಹಾದಿಯನ್ನು ಅನುಸರಿಸಿ ನಿಮ್ಮ ಎಡಭಾಗದಲ್ಲಿರುವ ಹಾದಿ ಗುಂಡಮಗೆರೆ ಕೆರೆಗೆ ಹೋಗುತ್ತದೆ ಮತ್ತು ಬಲಭಾಗದಲ್ಲಿರುವ ಸ್ವಲ್ಪ ಎತ್ತರದ ಹಾದಿ ಮಾಕಳಿದುರ್ಗದತ್ತ ಹೋಗುತ್ತದೆ. ನೀವು ನಿಮ್ಮ ಬಲಭಾಗದ ಹಾದಿಯನ್ನು ಹಿಡಿಯಿರಿ.

ಭೇಟಿ ನೀಡಿ
ದೊಡ್ಡಬಳ್ಳಾಪುರದ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಇತರೆ ತಾಲ್ಲೂಕು ಪ್ರವಾಸಿ ಸ್ಥಳಗಳು


Responsive Services Section