ಮುಸ್ತಪುರ್ ಆಣೆಕಟ್ಟು ಅಥವಾ ಚುಲ್ಕಿ ನಾಲಾ ಆಣೆಕಟ್ಟು ಕರ್ನಾಟಕ ರಾಜ್ಯದ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನಲ್ಲಿ ಮುಸ್ತಪುರ್ ಗ್ರಾಮದ ಹತ್ತಿರ ಇರುವ ಅಣೆಕಟ್ಟು. ನೀರಾವರಿ ಮತ್ತು ಕುಡಿಯುವ ನೀರಿನ ಉದ್ದೇಶಗಳಿಗಾಗಿ ಈ ಆಣೆಕಟ್ಟು ನಿರ್ಮಿಸಲಾಗಿದೆ. 1997 ರಲ್ಲಿ ಈ ಆಣೆಕಟ್ಟು ನಿರ್ಮಾಣ ಪೂರ್ಣಗೊಳಿಸಲಾಯಿತು.
ಈ ಆಣೆಕಟ್ಟು ಬೆಂಗಳೂರಿನಿಂದ 754 ಕಿ.ಮೀ (NH50 ಕರ್ನಾಟಕದ ಮೂಲಕ), 736 ಕಿ.ಮೀ (NH 44 ಹೈದರಾಬಾದ್ ಮೂಲಕ) ಮತ್ತು ಬೀದರ್ ನಿಂದ 87 ಕಿ.ಮೀ ದೂರದಲ್ಲಿದೆ. ಹಾಗೂ ಬಸವಕಲ್ಯಾಣ ತಾಲೂಕಿನಿಂದ 7 ಕಿ.ಮೀ ದೂರದಲ್ಲಿ ಇದೆ.
ಚುಲ್ಕಿನಾಲಾ ಒಂದು ನದಿ ಇದು ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನಲ್ಲಿರುವ ಚೌಕಿವಾಡಿಯಲ್ಲಿ ಪ್ರಾರಂಭವಾಗುತ್ತದೆ. ಈ ನದಿಯು ಬೀದರ್ ಜಿಲ್ಲೆಯಲ್ಲಿ 42 ಕಿ.ಮೀ ಹರಿಯುತ್ತದೆ ಮತ್ತು ಕರಣಜ ನದಿಗೆ ಸೇರುತ್ತದೆ. ಸುತ್ತಮುತ್ತಲ ಹಳ್ಳಿಗಳಿಗೆ ನೀರಾವರಿ ಮತ್ತು ಕುಡಿಯುವ ನೀರಿನ ಉದ್ದೇಶಗಳಿಗಾಗಿ ಮುಸ್ತಪುರ್ ಗ್ರಾಮದ ಹತ್ತಿರ ಒಂದು ಸಂಯೋಜಿತ ಅಣೆಕಟ್ಟು ನಿರ್ಮಿಸಲಾಯಿತು. ಅಣೆಕಟ್ಟು 0.93 ಟಿಎಂಸಿ ಅಡಿ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದೆ. ಒಟ್ಟು ಜಲಾನಯನ ಪ್ರದೇಶ 243.55 ಚದರ ಕಿ.ಮೀ.
ಭೇಟಿ ನೀಡಿ

