ಹಂಕುನಿ ಕೋಟೆಯು ಕರ್ನಾಟಕ ರಾಜ್ಯದ ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಹಂಕುನಿ ಗ್ರಾಮದ ಹೃದಯ ಭಾಗದಲ್ಲಿ ಇರುವ ಪುರಾತನ ಕೋಟೆಯಾಗಿದ್ದು, ಈ ಕೋಟೆಯನ್ನು ರಾಜ ರಾಮಚಂದ್ರ ಜಾಧವ್ ಆಳುತ್ತಿದ್ದ. ರಾಮಚಂದ್ರ ಜಾಧವ್ ಹಂಕುನಿಯಲ್ಲಿ ಕೋಟೆಯನ್ನು ನಿರ್ಮಿಸಿ ಹಾಗೂ ಅದನ್ನು ರಾಜ್ಯದ ಖಜಾನೆಯಾಗಿ ಬಳಸಿಕೊಂಡನೆಂದು ಹೇಳಲಾಗುತ್ತದೆ.
ಈ ಕೋಟೆಯು ಬೆಂಗಳೂರಿನಿಂದ 705 ಕಿ.ಮೀ (NH50 ಕರ್ನಾಟಕದ ಮೂಲಕ), 707 ಕಿ.ಮೀ (NH 44 ಹೈದರಾಬಾದ್ ಮೂಲಕ) ಮತ್ತು ಬೀದರ್ ನಿಂದ 62 ಕಿ.ಮೀ ದೂರದಲ್ಲಿದೆ. ಹಾಗೂ ಹುಮ್ನಾಬಾದ್ ನಿಂದ 9 ಕಿ.ಮೀ ದೂರದಲ್ಲಿ ಇದೆ.
ರಾಜಧಾನಿ ಹುಮ್ನಾಬಾದ್‌ನಿಂದ ಖಜಾನೆಯನ್ನು ದೂರವಿಡಲು, ಕಾರಣ ಶತ್ರು ಪಡೆಗಳ ದಾಳಿಯ ಸಮಯದಲ್ಲಿ ಅದರ ಸುರಕ್ಷತೆ ಕಾಯಲು ಈ ಕೋಟೆಯನ್ನು ನಿರ್ಮಿಸಿದನು. ಹನಕುನಿ (ಹಂಕುನಿ) ಎಂಬ ಹೆಸರನ್ನು ಎರಡು ಪದಗಳಾಗಿ ವಿಂಗಡಿಸಬಹುದು – ಹನ + ಕುಣಿ ಇಲ್ಲಿ ಹನ ಎಂದರೆ ಹಣ ಮತ್ತು ಕುಣಿ ಎಂದರೆ ಹಳ್ಳ.
ಭೇಟಿ ನೀಡಿ



