ಶ್ರೀ ಕಮಲೀಶ್ವರ ದೇವಾಲಯವು ಕರ್ನಾಟಕ ರಾಜ್ಯದ ಬೀದರ್ ಜಿಲ್ಲೆಯ ಹುಮನಾಬಾದ್ ತಾಲ್ಲೂಕಿನ ಜಲಸಂಘವಿ ಗ್ರಾಮದಲ್ಲಿರುವ 12ನೇ ಶತಮಾನದ ಪುರಾತನ ಶಿವ ದೇವಾಲಯವಾಗಿದೆ. ಈ ದೇವಾಲಯವನ್ನು ಕಲ್ಯಾಣಿ ಚಾಲುಕ್ಯ ರಾಜವಂಶದ ಆರನೇ ವಿಕ್ರಮಾದಿತ್ಯನು ನಿರ್ಮಿಸಿದನೆಂದು ನಂಬಲಾಗಿದೆ. ಈ ದೇವಾಲಯವನ್ನು ಕಮಲೀಶ್ವರ, ಕಮಲೇಶ್ವರ, ಕಲ್ಲೇಶ್ವರ ಹಾಗೂ ಈಶ್ವರ ದೇವಸ್ಥಾನ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ.
ಜಲಸಂಘವಿ ಶ್ರೀ ಕಮಲೀಶ್ವರ ದೇವಾಲಯದ ದೂರಗಳು
- ಬೆಂಗಳೂರು – 657 ಕಿ.ಮೀ
- ಬೀದರ್ – 43 ಕಿ.ಮೀ
- ಹುಮ್ನಾಬಾದ್ – 11 ಕಿ.ಮೀ
- ಹುಮ್ನಾಬಾದ್ ರೈಲ್ವೆ ನಿಲ್ದಾಣ – 12 ಕಿ.ಮೀ
- ಬೀದರ್ ವಿಮಾನ ನಿಲ್ದಾಣ – 48 ಕಿ.ಮೀ
ಶ್ರೀ ಕಮಲೀಶ್ವರ ದೇವಾಲಯವು ಮೂರು ಪ್ರಮುಖ ವಿಭಾಗಗಳನ್ನು ಹೊಂದಿದೆ. ಎಂಟು ಕಂಬಗಳನ್ನು ಹೊಂದಿರುವ ನೃತ್ಯ ಮಂಟಪ, ಸುಂದರ ಕೆತ್ತನೆಗಳಿಂದ ಅಲಂಕರಿಸಲ್ಪಟ್ಟ ನಂದಿ ಮಂಟಪ ಮತ್ತು ಗರ್ಭಗುಡಿ ಈ ದೇವಾಲಯದ ಪ್ರಮುಖ ಭಾಗಗಳಾಗಿವೆ. ಗರ್ಭಗುಡಿಯಲ್ಲಿ ಶಿವಲಿಂಗವಿದ್ದು, ಅದರ ಮುಂಭಾಗದಲ್ಲಿ ನಂದಿಯ ವಿಗ್ರಹವನ್ನು ಕಾಣಬಹುದು.
ಗರ್ಭಗುಡಿಯ ಪ್ರವೇಶದ್ವಾರವನ್ನು ದ್ವಾರಪಾಲಕರ ಹಾಗೂ ಯಾಳಿ ಶಿಲ್ಪಗಳಿಂದ ಅಲಂಕರಿಸಲಾಗಿದೆ. ಬಾಗಿಲಿನ ಮೇಲ್ಭಾಗದಲ್ಲಿ ಗಣಪತಿಯ ಸುಂದರ ಶಿಲ್ಪವಿದ್ದು, ದೇವಾಲಯದ ಒಳಭಾಗ ಮತ್ತು ಹೊರಭಾಗದ ಗೋಡೆಗಳು ಸೂಕ್ಷ್ಮವಾದ ಹಾಗೂ ಮನೋಹರ ಶಿಲ್ಪಕಲೆಗಳಿಂದ ಅಲಂಕರಿಸಲ್ಪಟ್ಟಿವೆ.
ಭೇಟಿ ನೀಡಿ







