ಮದ್ದೂರು ವಡೆ

ಕಜ್ಜಾಯ ಆಕಾರದಲ್ಲಿರುವ ಈ ಮದ್ದೂರು ವಡೆ, ಮಂಡ್ಯ ಜಿಲ್ಲೆಯ ಮದ್ದೂರು ಎಂಬ ಊರಿನಿಂದ ತನ್ನ ಹೆಸರನ್ನು ಪಡೆದುಕೊಂಡಿದೆ. ತುಂಬ ರುಚಿಯಾಗಿರುವ ಈ ಮದ್ದೂರು ವಡೆಯನ್ನು ಅಕ್ಕಿ ಹಿಟ್ಟು, ರವೆ, ಮೈದಾ, ಈರುಳ್ಳಿ, ಕರಿಬೇವು, ಕೊಬ್ಬರಿ ಮತ್ತು ಇಂಗು ಬಳಸಿ ತಯಾರಿಸಲಾಗುತ್ತದೆ.

ತುಂಬ ಇಷ್ಟಪಟ್ಟು ತಿನ್ನುವ “ಗರಂ ಗರಂ” ಎನ್ನುವ ತಿನಿಸು ಇದಾಗಿದೆ. ಕರ್ನಾಟಕದ ಪ್ರಸಿದ್ಧ ಎಣ್ಣೆಯಲ್ಲಿ ಕರಿದ ಪದಾರ್ಥಗಳಲ್ಲಿ ಇದೂ ಒಂದು. ಇದನ್ನು ತಿನ್ನಲು ಸ್ವಲ್ಪ ಖಾರವಾಗಿರುತ್ತದೆ. ಅದರಿಂದ ಇದು ಸುಲಭವಾಗಿ ಎಲ್ಲರ ಪ್ರಿಯ ತಿನಿಸಾಗಿ ಬಿಡುತ್ತದೆ. ಈ ಮದ್ದೂರು ವಡೆಗೆ ಬೆಂಗಳೂರು–ಮೈಸೂರು ರೈಲು ನಿಲ್ದಾಣಗಳಲ್ಲಿ ಅತಿ ಹೆಚ್ಚು ಬೇಡಿಕೆ ಇದೆ.

Read Also
ಕರ್ನಾಟಕದ ಇತರೆ ತಿನಿಸುಗಳು


Responsive Services Section

Read Also


Responsive Services Section