ಹೆಳವನಕಟ್ಟೆ ಶ್ರೀ ಲಕ್ಷ್ಮೀರಂಗನಾಥ ಸ್ವಾಮಿ ದೇವಾಲಯ

ಹೆಳವನಕಟ್ಟೆ ಶ್ರೀ ಲಕ್ಷ್ಮೀ ರಂಗನಾಥಸ್ವಾಮಿ ದೇವಾಲಯವು ಕರ್ನಾಟಕ ರಾಜ್ಯದ ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಕೋಮರನಹಳ್ಳಿ ಗ್ರಾಮದಲ್ಲಿದೆ. ಹೆಳವನಕಟ್ಟೆ ಶ್ರೀ ಲಕ್ಷ್ಮೀ ರಂಗನಾಥಸ್ವಾಮಿ ದೇವಾಲಯವು ಮಹಾನ್ ಹರಿಭಕ್ತೆ ಹಾಗೂ ಕೀರ್ತನಗಾರ್ತಿ ಹೆಳವನಕಟ್ಟೆ ಗಿರಿಯಮ್ಮನವರಿಗೆ ಕೀರ್ತನೆಗಳನ್ನು ರಚಿಸಲು ಪ್ರೇರಣೆಯಾದ ಪವಿತ್ರ ಕ್ಷೇತ್ರವಾಗಿದೆ.

ಹೆಳವನಕಟ್ಟೆ ಶ್ರೀ ಲಕ್ಷ್ಮೀ ರಂಗನಾಥಸ್ವಾಮಿ ದೇವಾಲಯದ ದೂರಗಳು

  • ಬೆಂಗಳೂರು – 286 ಕಿ.ಮೀ
  • ದಾವಣಗೆರೆ – 30 ಕಿ.ಮೀ
  • ಹರಿಹರ – 22 ಕಿ.ಮೀ
  • ಹರಿಹರ ರೈಲ್ವೆ ನಿಲ್ದಾಣ – 22 ಕಿ.ಮೀ

ಖ್ಯಾತ ಸಾಹಿತಿ ತ. ರಾ. ಸು. ಅವರ ಹುಟ್ಟೂರಾದ ಮಲೆಬೆನ್ನೂರಿನಿಂದ ಸುಮಾರು 1 ಕಿ.ಮೀ. ಮುಂದೆ ಸಾಗಿದರೆ ಕೋಮರನಹಳ್ಳಿ ಗ್ರಾಮ ಸಿಗುತ್ತದೆ. ಇದು ಹರಿಹರ ತಾಲ್ಲೂಕಿನ ಕೊನೆಯ ಗ್ರಾಮವಾಗಿದೆ. ಇಲ್ಲಿ ಶ್ರೀ ಲಕ್ಷ್ಮೀ ರಂಗನಾಥಸ್ವಾಮಿ ದೇವಾಲಯವಿದೆ. ಈ ದೇವಾಲಯದ ವಿಶೇಷವೆಂದರೆ, ಇಲ್ಲಿ ರಂಗ ಮತ್ತು ಲಿಂಗ (ಹರಿ-ಹರ) ಒಂದೇ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿತವಾಗಿವೆ. ಇದೇ ಸ್ಥಳದಲ್ಲಿ ಶ್ರೀ ರಂಗನಾಥನ ಪರಮಭಕ್ತೆಯಾದ ಹೆಳವನಕಟ್ಟೆ ಗಿರಿಯಮ್ಮನ ದೇವಾಲಯವೂ ಇದೆ. ಅವರು ಅನೇಕ ಭಕ್ತಿ ಕೀರ್ತನೆಗಳನ್ನು ರಚಿಸಿದ್ದಾರೆ. ದೇವಾಲಯದ ಪಕ್ಕದಲ್ಲೇ ಶ್ರೀ ಶಂಕರಲಿಂಗ ಭಗವಾನರ ಆಶ್ರಮ ಹಾಗೂ ಸಮಾಧಿಯಿದೆ. ದೇವಾಲಯಕ್ಕೆ ಹೊಂದಿಕೊಂಡಂತೆ ವಿಶಾಲವಾದ ಕೆರೆಯೂ ಇದೆ.

ಹೆಳವನಕಟ್ಟೆ ಗಿರಿಯಮ್ಮ

ಹೆಳವನಕಟ್ಟೆ ಗಿರಿಯಮ್ಮ ಅವರು ಕ್ರಿ.ಶ. 1570ರ ಸುಮಾರಿಗೆ ಜೀವಿಸಿದ್ದರು. ಅವರ ತವರೂರು ಹಾವೇರಿ ಜಿಲ್ಲೆಯ ರಾಣೆಬೆನ್ನೂರು. ತಾಯಿ ತುಂಗಮ್ಮ ಹಾಗೂ ತಂದೆ ಬಿಷ್ಟಪ್ಪ ಜೋಯಿಸ. ದೀರ್ಘಕಾಲ ಸಂತಾನವಿಲ್ಲದಿದ್ದ ಇವರಿಗೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಬಳಿಕ ಹೆಣ್ಣು ಮಗು ಜನಿಸಿತು. ತಿಮ್ಮಪ್ಪನ ಅನುಗ್ರಹದ ಸಂಕೇತವಾಗಿ ಆ ಮಗುವಿಗೆ “ಗಿರಿಯಮ್ಮ” ಎಂದು ಹೆಸರಿಟ್ಟರು ಎಂಬ ಪ್ರತೀತಿ ಇದೆ.

ಭೇಟಿ ನೀಡಿ
ಹರಿಹರ ತಾಲ್ಲೂಕಿನ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ದಾವಣಗೆರೆ ಜಿಲ್ಲೆಯ ಇತರೆ ತಾಲ್ಲೂಕು ಪ್ರವಾಸಿ ಸ್ಥಳಗಳು


Responsive Services Section