ಪಡುಕೋಟೆ

ಪಡುಕೋಟೆಯು ಕರ್ನಾಟಕ ರಾಜ್ಯದ ಯಾದಗಿರಿ ಜಿಲ್ಲೆಯ ಶೋರಾಪುರ (ಸುರಪುರ) ತಾಲ್ಲೂಕಿನ ವಾಗಣಗೇರಾ ಗ್ರಾಮದ ಸಮೀಪದಲ್ಲಿರುವ ಪ್ರಸಿದ್ಧ ಐತಿಹಾಸಿಕ ಕೋಟೆಯಾಗಿದೆ. ಸುರಪುರವನ್ನು ಅಂದಾಜು 16ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ವಾಗಣಗೇರಾ ಕೋಟೆಯೂ ಇದೇ ಕಾಲಘಟ್ಟದಲ್ಲಿ ನಿರ್ಮಾಣಗೊಂಡಿದೆ ಎಂದು ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ.

ಪಡುಕೋಟೆಯ ದೂರಗಳು

  • ಬೆಂಗಳೂರು – 460 ಕಿ.ಮೀ
  • ಯಾದಗಿರಿ – 59 ಕಿ.ಮೀ
  • ಶೋರಾಪುರ– 13 ಕಿ.ಮೀ
  • ಯಾದಗಿರಿ ರೈಲ್ವೆ ನಿಲ್ದಾಣ – 58 ಕಿ.ಮೀ

ಸುರಪುರ ಇತಿಹಾಸ ಸಂಶೋಧನಾ ಕೇಂದ್ರದ ಮುಖ್ಯಸ್ಥ ಭಾಸ್ಕರರಾವ್ ಮುಡಬೂಳ ಅವರ ಪ್ರಕಾರ, ಈ ಪ್ರದೇಶವು ಆರಂಭದಲ್ಲಿ ಮೊಘಲರ ಆಳ್ವಿಕೆಗೆ ಒಳಪಟ್ಟಿತ್ತು. ನಂತರ ಶೂರರಾದ ಸುರಪುರದ ಅರಸರು ಈ ಕೋಟೆಗಳನ್ನು ಮೊಘಲರಿಂದ ವಶಪಡಿಸಿಕೊಂಡರು. ಸುರಪುರ ನಾಯಕರ ಮೂಲ ರಾಜಧಾನಿಯು ವಾಗಣಗೇರಿ ಆಗಿತ್ತು.

ಸ್ಥಳೀಯ ಐತಿಹ್ಯದ ಪ್ರಕಾರ, ವಾಗಣಗೇರಾ ಯುದ್ಧದಲ್ಲಿ ಮೊಘಲ ಚಕ್ರವರ್ತಿ ಔರಂಗಜೇಬನ ಸೇನೆಗೆ ಭಾರೀ ಹಿನ್ನಡೆಯಾಯಿತು. ಅಲ್ಲದೆ, ದಕ್ಷಿಣ ಭಾರತದ ಅನೇಕ ದೇವಾಲಯಗಳನ್ನು ರಕ್ಷಿಸುವಲ್ಲಿ ಸುರಪುರದ ಅರಸರು ಮಹತ್ವದ ಪಾತ್ರ ವಹಿಸಿದ್ದರು ಎಂದು ಅವರು ತಿಳಿಸಿದ್ದಾರೆ.

ಛತ್ರಪತಿ ಶಿವಾಜಿ ಮಹಾರಾಜರ ನಿಧನದ ನಂತರ, ಅವರ ಪುತ್ರ ಸಂಭಾಜಿ ಮಹಾರಾಜರನ್ನು ಮೊಘಲರು ಸೋಲಿಸಿ ಹತ್ಯೆ ಮಾಡಿದ ಬಳಿಕ ಮರಾಠ ಸಾಮ್ರಾಜ್ಯದ ಮೇಲೆ ದಾಳಿಗಳು ತೀವ್ರಗೊಂಡವು. ಆ ಸಂದರ್ಭದಲ್ಲಿ ಅನೇಕ ಮರಾಠ ಯೋಧರಿಗೆ ಸುರಪುರದ ಅರಸರು ಆಶ್ರಯ ನೀಡಿ, ಅವರಿಗೆ ಉಂಬಳಿ (ಇನಾಂ ಭೂಮಿ) ನೀಡಿದರೆಂದು ಹೇಳಲಾಗುತ್ತದೆ.

ಇಂದಿಗೂ ಪಡುಕೋಟೆ, ವಾಗಣಗೇರಾ ಮತ್ತು ಹಾವಿನಾಳ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮರಾಠ ಸಮುದಾಯದ ಕುಟುಂಬಗಳು ವಾಸಿಸುತ್ತಿವೆ. ಸ್ಥಳೀಯ ಇತಿಹಾಸದ ಪ್ರಕಾರ, ಸುರಪುರ ಅರಸರ ಋಣ ತೀರಿಸುವ ಉದ್ದೇಶದಿಂದ ಅವರು ಅನೇಕ ಯುದ್ಧಗಳಲ್ಲಿ ಧೈರ್ಯದಿಂದ ಹೋರಾಡಿ ರಾಜ್ಯದ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಯಾದಗಿರಿ
ಸುರಪುರ (ಶೋರಾಪುರ) ತಾಲ್ಲೂಕಿನ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಯಾದಗಿರಿ ಜಿಲ್ಲೆಯ ಇತರೆ ತಾಲ್ಲೂಕು ಪ್ರವಾಸಿ ಸ್ಥಳಗಳು


Responsive Services Section