ಜಂಬದಹಳ್ಳ ಜಲಾಶಯ

ಜಂಬದಹಳ್ಳ ಜಲಾಶಯವು ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಸಿದ್ಧರಹಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ಇರುವ ಸುಂದರವಾದ ಜಲಾಶಯವಾಗಿದೆ. ಜಲಾಶಯಕ್ಕೆ ಅಡ್ಡಲಾಗಿ ಚೆಕ್‌ಡ್ಯಾಂ ನಿರ್ಮಿಸಲಾಗಿದೆ. ಈ ಸ್ಥಳವು ಒಂದು ದಿನದ ಪ್ರವಾಸಕ್ಕೆ ಸೂಕ್ತವಾದ ತಾಣವಾಗಿದೆ.

ಜಂಬದಹಳ್ಳ ಜಲಾಶಯದ ದೂರಗಳು

  • ಬೆಂಗಳೂರು – 246 ಕಿ.ಮೀ
  • ಚಿಕ್ಕಮಗಳೂರು – 65 ಕಿ.ಮೀ
  • ತರೀಕೆರೆ – 9 ಕಿ.ಮೀ
  • ತರೀಕೆರೆ ರೈಲ್ವೆ ನಿಲ್ದಾಣ – 10 ಕಿ.ಮೀ
  • ಶಿವಮೊಗ್ಗ ವಿಮಾನ ನಿಲ್ದಾಣ – 35 ಕಿ.ಮೀ

ಸುತ್ತಮುತ್ತಲಿನ ಪ್ರದೇಶವು ಅತ್ಯಂತ ಶಾಂತಿಯುತವಾಗಿದ್ದು, ಹಚ್ಚಹಸಿರಿನ ಪ್ರಕೃತಿಯಿಂದ ಆವೃತವಾಗಿದೆ. ಜಲಾಶಯದ ಸುಂದರ ಪರಿಸರವು ಪ್ರವಾಸಿಗರಿಗೆ ವಿಶ್ರಾಂತಿ ಪಡೆಯಲು ಮತ್ತು ಪ್ರಕೃತಿಯ ಸೌಂದರ್ಯವನ್ನು ಸವಿಯಲು ಉತ್ತಮ ಸ್ಥಳವಾಗಿದೆ.