ಜಂಬದಹಳ್ಳ ಜಲಾಶಯವು ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಸಿದ್ಧರಹಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ಇರುವ ಸುಂದರವಾದ ಜಲಾಶಯವಾಗಿದೆ. ಜಲಾಶಯಕ್ಕೆ ಅಡ್ಡಲಾಗಿ ಚೆಕ್ಡ್ಯಾಂ ನಿರ್ಮಿಸಲಾಗಿದೆ. ಈ ಸ್ಥಳವು ಒಂದು ದಿನದ ಪ್ರವಾಸಕ್ಕೆ ಸೂಕ್ತವಾದ ತಾಣವಾಗಿದೆ.
ಜಂಬದಹಳ್ಳ ಜಲಾಶಯದ ದೂರಗಳು
- ಬೆಂಗಳೂರು – 246 ಕಿ.ಮೀ
- ಚಿಕ್ಕಮಗಳೂರು – 65 ಕಿ.ಮೀ
- ತರೀಕೆರೆ – 9 ಕಿ.ಮೀ
- ತರೀಕೆರೆ ರೈಲ್ವೆ ನಿಲ್ದಾಣ – 10 ಕಿ.ಮೀ
- ಶಿವಮೊಗ್ಗ ವಿಮಾನ ನಿಲ್ದಾಣ – 35 ಕಿ.ಮೀ
ಸುತ್ತಮುತ್ತಲಿನ ಪ್ರದೇಶವು ಅತ್ಯಂತ ಶಾಂತಿಯುತವಾಗಿದ್ದು, ಹಚ್ಚಹಸಿರಿನ ಪ್ರಕೃತಿಯಿಂದ ಆವೃತವಾಗಿದೆ. ಜಲಾಶಯದ ಸುಂದರ ಪರಿಸರವು ಪ್ರವಾಸಿಗರಿಗೆ ವಿಶ್ರಾಂತಿ ಪಡೆಯಲು ಮತ್ತು ಪ್ರಕೃತಿಯ ಸೌಂದರ್ಯವನ್ನು ಸವಿಯಲು ಉತ್ತಮ ಸ್ಥಳವಾಗಿದೆ.



