ಶ್ರವಣಬೆಳಗೊಳವು ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ಇರುವ ಐತಿಹಾಸಿಕ, ಧಾರ್ಮಿಕ ಮತ್ತು ಪ್ರವಾಸಿ ತಾಣವಾಗಿದೆ. ಇಲ್ಲಿ ವಿಶ್ವವಿಖ್ಯಾತ 58 ಅಡಿ ಎತ್ತರದ ಏಕಶಿಲ ಬಾಹುಬಲಿಯ ಪ್ರತಿಮೆ ಇದೆ. ಈ ಏಕಶಿಲ ಬಾಹುಬಲಿಯ ಮೂರ್ತಿಯನ್ನು ನಾಲ್ಕನೇ ರಾಜಮಲ್ಲನ ಮಂತ್ರಿಯಾಗಿದ್ದ ಚಾವುಂಡರಾಯರು ನಿರ್ಮಿಸಿದರು. ಇದು ಜೈನ ಧಾರ್ಮಿಕ ಕೇಂದ್ರವಾಗಿದೆ. ಚಾವುಂಡರಯರು “ಚಾವುಂಡರಾಯ ಪುರಾಣ”ವನ್ನು ರಚಿಸಿದರು.
ಶ್ರವಣಬೆಳಗೊಳದ ದೂರಗಳು
- ಬೆಂಗಳೂರು – 151 ಕಿ.ಮೀ
- ಹಾಸನ – 53 ಕಿ.ಮೀ
- ಚನ್ನರಾಯಪಟ್ಟಣ – 12 ಕಿ.ಮೀ
- ಶ್ರವಣಬೆಳಗೊಳ ರೈಲ್ವೆ ನಿಲ್ದಾಣ – 33 ಕಿ.ಮೀ
ಏಷ್ಯಾ ಖಂಡದಲ್ಲಿಯೇ ಅತಿ ಎತ್ತರದ ಮತ್ತು ಭಾರತದ ಅತಿ ಎತ್ತರದ ಏಕಶಿಲಾ ವಿಗ್ರಹಗಳಲ್ಲಿ ದೊಡ್ಡದಾದ ಗೊಮ್ಮಟೇಶ್ವರನ ಶಿಲೆಯಿರುವ ಶ್ರವಣಬೆಳಗೋಳವು ಪ್ರಸಿದ್ಧ ಜೈನ ಪುಣ್ಯಕ್ಷೇತ್ರವಾಗಿದೆ. ವಿಂಧ್ಯಗಿರಿಯ ಮೇಲೆ ಕೆತ್ತಲ್ಪಟ್ಟಿರುವ ಈ ಬೃಹದಾಕಾರದ ಮೂರ್ತಿಯನ್ನು ಚಾವುಂಡರಾಯನು ಕ್ರಿ.ಶ. 981ರಲ್ಲಿ ನಿರ್ಮಿಸಿದನು. ಪ್ರತಿ 12 ವರ್ಷಕ್ಕೊಮ್ಮೆ ಇಲ್ಲಿ ಮಹಾಮಸ್ತಕಾಭಿಷೇಕ ನಡೆಯುತ್ತದೆ.
ಭೇಟಿ ನೀಡಿ










