ಶ್ರವಣಬೆಳಗೊಳವು ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿರುವ ಐತಿಹಾಸಿಕ, ಧಾರ್ಮಿಕ ಹಾಗೂ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಇಲ್ಲಿ ವಿಶ್ವವಿಖ್ಯಾತ 58 ಅಡಿ ಎತ್ತರದ ಏಕಶಿಲಾ ಬಾಹುಬಲಿಯ ಪ್ರತಿಮೆಯಿದೆ. ಈ ಪ್ರತಿಮೆಯನ್ನು ಪಶ್ಚಿಮ ಗಂಗ ರಾಜವಂಶದ ನಾಲ್ಕನೇ ರಾಚಮಲ್ಲನ ಆಳ್ವಿಕೆಯಲ್ಲಿ, ಅವರ ಮಂತ್ರಿಯಾಗಿದ್ದ ಚಾವುಂಡರಾಯರು ನಿರ್ಮಿಸಿದರು. ಶ್ರವಣಬೆಳಗೊಳವು ಜೈನ ಧರ್ಮದ ಪ್ರಮುಖ ತೀರ್ಥಕ್ಷೇತ್ರಗಳಲ್ಲಿ ಒಂದಾಗಿದೆ. ಚಾವುಂಡರಾಯರು ಕನ್ನಡ ಸಾಹಿತ್ಯದ ಪ್ರಸಿದ್ಧ ಗ್ರಂಥವಾದ ಚಾವುಂಡರಾಯ ಪುರಾಣವನ್ನು ರಚಿಸಿದರು.
ಶ್ರವಣಬೆಳಗೊಳದ ದೂರಗಳು
- ಬೆಂಗಳೂರು – 151 ಕಿ.ಮೀ
- ಹಾಸನ – 53 ಕಿ.ಮೀ
- ಚನ್ನರಾಯಪಟ್ಟಣ – 12 ಕಿ.ಮೀ
- ಶ್ರವಣಬೆಳಗೊಳ ರೈಲ್ವೆ ನಿಲ್ದಾಣ – 33 ಕಿ.ಮೀ
ಶ್ರವಣಬೆಳಗೊಳವು ಏಷ್ಯಾದ ಅತಿ ಎತ್ತರದ ಹಾಗೂ ಭಾರತದ ಅತಿ ಎತ್ತರದ ಏಕಶಿಲಾ ವಿಗ್ರಹಗಳಲ್ಲಿ ಒಂದಾದ ಗೊಮ್ಮಟೇಶ್ವರ (ಬಾಹುಬಲಿ)ನ ಪ್ರತಿಮೆಯನ್ನು ಹೊಂದಿರುವ ಪ್ರಸಿದ್ಧ ಜೈನ ತೀರ್ಥಕ್ಷೇತ್ರವಾಗಿದೆ. ಇಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ಮಹಾಮಸ್ತಕಾಭಿಷೇಕ ಮಹೋತ್ಸವವು ವಿಜೃಂಭಣೆಯಿಂದ ನಡೆಯುತ್ತದೆ.
ತಮ್ಮ ತಾಯಿ ಕಾಳಲಾದೇವಿಯ ಆಸೆಯಂತೆ, ವಿಂಧ್ಯಗಿರಿಯ ಮೇಲೆ ಈ ಬೃಹತ್ ಏಕಶಿಲಾ ಬಾಹುಬಲಿಯ ಪ್ರತಿಮೆಯನ್ನು ಚಾವುಂಡರಾಯರು ಕ್ರಿ.ಶ. 981ರಲ್ಲಿ ನಿರ್ಮಿಸಿದರು.
ಭೇಟಿ ನೀಡಿ










