ಶೆಟ್ಟಿಹಳ್ಳಿ ರೋಜರಿ ಚರ್ಚ್ ಇದು ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯಲ್ಲಿ ಇದೆ. ಈ ಚರ್ಚನ್ನು ಫ್ರೆಂಚ್ ಮಿಷನರಿಗಳು 1860 ರ ದಶಕದಲ್ಲಿ ನಿರ್ಮಿಸಲಾಗಿದೆ. 1979 ರಲ್ಲಿ ಹೇಮಾವತಿ ಅಣೆಕಟ್ಟು ಮತ್ತು ಜಲಾಶಯದ ನಿರ್ಮಾಣದಿಂದ ಈ ಚರ್ಚ್ ನೀರಿನಲ್ಲಿ ಮುಳುಗಡೆ ಗೊಂಡಿದೆ. ಅಂದಿನಿಂದ ಈ ಸ್ಥಳವು ಪ್ರಸಿದ್ಧ ಪ್ರವಾಸಿ ಸ್ಥಳವಾಗಿದೆ. ಈ ಚರ್ಚನ್ನು ಮುಳುಗಿದ ಚರ್ಚ್ ಅಥವಾ ತೇಲುವ ಚರ್ಚ್ ಎಂದು ಕರೆಯಲಾಗುತ್ತದೆ.
ಶೆಟ್ಟಿಹಳ್ಳಿ ರೋಸರಿ ಚರ್ಚ್ ಬೆಂಗಳೂರಿನಿಂದ 253 ಕಿ.ಮೀ ಮತ್ತು ಹಾಸನ ನಗರದಿಂದ 21 ಕಿ.ಮೀ ದೂರದಲ್ಲಿದೆ. ಹಾಗೂ ಹಾಸನ ರೈಲ್ವೆ ನಿಲ್ದಾಣದಿಂದ 22 ಕಿ.ಮೀ ದೂರದಲ್ಲಿದೆ.
ಇತಿಹಾಸ
ಈ ಚರ್ಚನ್ನು ಶ್ರೀಮಂತ ಬ್ರಿಟಿಷ್ ಎಸ್ಟೇಟ್ ಮಾಲೀಕರಿಗಾಗಿ ಫ್ರೆಂಚ್ ಮಿಷನರಿಗಳು 1860 ರಲ್ಲಿ ನಿರ್ಮಿಸಿದರು. ನಂತರ ಹೇಮಾವತಿ ಅಣೆಕಟ್ಟು ಮತ್ತು ಜಲಾಶಯ ನಿರ್ಮಾಣದ ಕಾರಣದಿಂದ ಈ ಚರ್ಚ್ ನ ಸ್ಥಾಪನೆ ಸ್ಥಗಿತಗೊಂಡಿತ್ತು. ಈ ಚರ್ಚ್ ಗೋಥಿಕ್ ವಾಸ್ತುಶಿಲ್ಪದ ಶೈಲಿಯಲ್ಲಿ ನಿರ್ಮಾಣಗೊಂಡಿದೆ.
ಭೇಟಿ ನೀಡಿ