ಶೆಟ್ಟಿಹಳ್ಳಿ ರೋಸರಿ ಚರ್ಚ್ ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯ ಹಾಸನ ತಾಲ್ಲೂಕಿನಲ್ಲಿ ಇರುವ ಚರ್ಚ್. ಈ ಚರ್ಚನ್ನು ಫ್ರೆಂಚ್ ಮಿಷನರಿಗಳು 1860ರ ದಶಕದಲ್ಲಿ ನಿರ್ಮಿಸಿದರು. 1979ರಲ್ಲಿ ಹೇಮಾವತಿ ಅಣೆಕಟ್ಟು ಮತ್ತು ಜಲಾಶಯದ ನಿರ್ಮಾಣದಿಂದ ಈ ಚರ್ಚ್ ನೀರಿನಲ್ಲಿ ಮುಳುಗಡೆಯಾಯಿತು. ಅದರ ನಂತರ ಈ ಸ್ಥಳವು ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಈ ಚರ್ಚನ್ನು ‘ಮುಳುಗಿದ ಚರ್ಚ್’ ಅಥವಾ ‘ತೇಲುವ ಚರ್ಚ್’ ಎಂದು ಕರೆಯಲಾಗುತ್ತದೆ.
ಶೆಟ್ಟಿಹಳ್ಳಿ ರೋಸರಿ ಚರ್ಚಿನ ದೂರಗಳು
- ಬೆಂಗಳೂರು – 200 ಕಿ.ಮೀ
- ಹಾಸನ – 20 ಕಿ.ಮೀ
- ಹಾಸನ ರೈಲ್ವೆ ನಿಲ್ದಾಣ – 22 ಕಿ.ಮೀ
ಇತಿಹಾಸ
ಈ ಚರ್ಚನ್ನು ಶ್ರೀಮಂತ ಬ್ರಿಟಿಷ್ ಎಸ್ಟೇಟ್ ಮಾಲೀಕರಿಗಾಗಿ ಫ್ರೆಂಚ್ ಮಿಷನರಿಗಳು 1860ರಲ್ಲಿ ನಿರ್ಮಿಸಿದರು. ನಂತರ ಹೇಮಾವತಿ ಅಣೆಕಟ್ಟು ಮತ್ತು ಜಲಾಶಯದ ನಿರ್ಮಾಣದ ಕಾರಣದಿಂದ ಈ ಚರ್ಚ್ ತೊರೆಯಲ್ಪಟ್ಟು ನೀರಿನಲ್ಲಿ ಮುಳುಗಿತು. ಈ ಚರ್ಚ್ ಗೋಥಿಕ್ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಾಣಗೊಂಡಿದೆ.
ಭೇಟಿ ನೀಡಿ









