ಕಾಲಕಾಲೇಶ್ವರ ದೇವಾಲಯ ಗಜೇಂದ್ರಗಡ

ಕಾಲಕಾಲೇಶ್ವರ ದೇವಾಲಯವು ಕರ್ನಾಟಕ ರಾಜ್ಯದ ಗದಗ ಜಿಲ್ಲೆಯ ಗಜೇಂದ್ರಗಡ ನಗರ ಹತ್ತಿರ, ಸುಮಾರು 300 ಅಡಿ ಎತ್ತರದ ಬೆಟ್ಟದ ಮೇಲೆ ಸ್ಥಿತವಾಗಿದೆ. ಕಾಲಕಾಲೇಶ್ವರ ದೇವಾಲಯವು ಪುರಾತನ ದೇವಾಲಯವಾಗಿದ್ದು, ಇದನ್ನು “ದಕ್ಷಿಣ ಕಾಶಿ” ಎಂದು ಸಹ ಕರೆಯುತ್ತಾರೆ. ಇಲ್ಲಿ ಕಾಲಕಾಲೇಶ್ವರನ ರೂಪದಲ್ಲಿ ಪೂಜಿಸಲ್ಪಡುವ ಶಿವನ ಕಾಲಕಾಲೇಶ್ವರ ಅಥವಾ ದಕ್ಷಿಣ ಕಾಶಿ ದೇವಸ್ಥಾನವಿದೆ. ಇದು ಉದ್ಭವ ಲಿಂಗವನ್ನು ಹೊಂದಿರುವ ಸಾಂಪ್ರದಾಯಿಕ ದೇವಾಲಯವಾಗಿದೆ.

ಗಜೇಂದ್ರಗಡ ಶ್ರೀ ಕಾಲಕಾಲೇಶ್ವರ ದೇವಾಲಯದ ದೂರಗಳು

  • ಬೆಂಗಳೂರು – 415 ಕಿ.ಮೀ
  • ಗದಗ – 59 ಕಿ.ಮೀ
  • ಗಜೇಂದ್ರಗಡ – 6 ಕಿ.ಮೀ
  • ಮಾಲಾಪುರ ರೈಲ್ವೆ ನಿಲ್ದಾಣ – 40 ಕಿ.ಮೀ

ಈ ದೇವಾಲಯದಲ್ಲಿ ಭಗವಾನ್ ಶಿವನನ್ನು ಕಾಲಕಾಲೇಶ್ವರ ರೂಪದಲ್ಲಿ ಪೂಜಿಸಲಾಗುತ್ತದೆ. ಪ್ರವಾಸಿಗರು ಈ ಪ್ರಾಚೀನ ದೇವಾಲಯವನ್ನು ನೇರವಾಗಿ, ಸುಮಾರು 200 ಮೆಟ್ಟಿಲುಗಳನ್ನು ಏರಿಕೆಯ ಮೂಲಕ ಅನುಕೂಲವಾಗಿ ತಲುಪಬಹುದು. ಬೆಟ್ಟವನ್ನು ಹತ್ತಲು ಈ ಕಾಲ್ನಡಿಗೆಯೇ ಏಕೈಕ ಮಾರ್ಗವಾಗಿದೆ.

ಗಜಾಸುರ ಎಂಬ ಅಸುರರ ಸಂಹಾರದ ಬಳಿಕ, ಕಾಶಿ ಕ್ಷೇತ್ರದಿಂದ ವಿಶ್ವೇಶ್ವರ ದೇವರು ಇಲ್ಲಿ ಬಂದು ಗಜಾಸುರನನ್ನು ಸಂಹಾರ ಮಾಡಿದ ನಂತರ, ಭಕ್ತರ ಇಷ್ಟಾರ್ಥದಂತೆ ಉದ್ಭವ ಲಿಂಗದ ರೂಪದಲ್ಲಿ ಇಲ್ಲಿ ನೆಲೆಸಿದರು. ಈ ಲಿಂಗವನ್ನು ಕಾಲಕಾಲೇಶ್ವರ ಎಂದು ಕರೆಯುತ್ತಾರೆ. ದೇವರು ನೆಲೆಸಿರುವ ಏಕಶಿಲಾ ಬಂಡೆಯ ಗುಡ್ಡವನ್ನು ಕಳಕಪ್ಪದ ಗುಡ್ಡ ಎಂದು ಪ್ರಸಿದ್ಧವಾಗಿದೆ.

ಭೇಟಿ ನೀಡಿ
ಗಜೇಂದ್ರಗಡ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಗದಗ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section