ಕಸ್ತೂರಿ ರಂಗಪ್ಪ ನಾಯಕ ಕೋಟೆ

ಕಸ್ತೂರಿ ರಂಗಪ್ಪ ನಾಯಕ ಕೋಟೆ ಅಥವಾ ಸಿರಾ ಕೋಟೆಯು ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಸಿರಾದಲ್ಲಿರುವ ಒಂದು ಐತಿಹಾಸಿಕ ಕೋಟೆಯಾಗಿದೆ. ಶಿರಾ ನಗರ ಮತ್ತು ಕೋಟೆಯನ್ನು ರತ್ನಗಿರಿ ಪಾಳೆಯಗಾರ ಕಸ್ತೂರಿ ರಂಗಪ್ಪ ನಾಯಕನು 17 ನೇ ಶತಮಾನದಲ್ಲಿ ಪ್ರಾರಂಭಿಸಿದನೆಂದು ಹೇಳಲಾಗಿದೆ. ಆಡಳಿತಾಧಿಕಾರಿ ಮಲ್ಲಿಕ್ ಹುಸೇನ್ ಈ ಕೋಟೆಯನ್ನು ಪೂರ್ಣಗೊಳಿಸಿದ ನಂತರ ಶಿರಾ ನವಾಬರು ಅಭಿವೃದ್ಧಿ ಪಡಿಸಿದರು. ಕಸ್ತೂರಿ ರಂಗಪ್ಪ ನಾಯಕರ ಆಳ್ವಿಕೆಯ ನಂತರ, ಕೋಟೆ ಮತ್ತು ಸಿರಾ ಪ್ರಾಂತ್ಯವು ಹಲವಾರು ಆಡಳಿತಗಾರರ ನಿಯಂತ್ರಣಕ್ಕೆ ಒಳಪಟ್ಟಿತು.

ಈ ಕೋಟೆಯು ಬೆಂಗಳೂರಿಂದ 122 ಕಿ.ಮೀ ದೂರದಲ್ಲಿದೆ ಮತ್ತು ತುಮಕೂರಿನಿಂದ 54 ಕಿ.ಮೀ ದೂರದಲ್ಲಿದೆ ಹಾಗೂ ಸಿರಾ ದಿಂದ ಕೇವಲ 02 ಕಿ.ಮೀ ದೂರದಲ್ಲಿದೆ.

ಈ ಕೋಟೆ ಗೋಡೆಯು 7 ಮೀಟರ್ ಎತ್ತರವಿದ್ದು 2.13 ಮೀಟರ್ ದಪ್ಪವಿದೆ. ಕೋಟೆಯ ಉತ್ತರ ದಿಕ್ಕಿನಲ್ಲಿ ಪ್ರವೇಶ ದ್ವಾರವಿದೆ. ಒಳಗಿನ ಆವರಣವನ್ನು ತಲುಪಲು ಮೂರು ದ್ವಾರಗಳಿದ್ದು, ಅವುಗಳೆಂದರೆ ದಿಡ್ಡಿ ಬಾಗಿಲು, ದ್ರಾವಿಡ ಶೈಲಿಯ ಕಂಬಗಳ ಬಾಗಿಲು ಮತ್ತು ದಕ್ಷಿಣ ಕೋಟೆಯ ಗೋಡೆಯಲ್ಲಿರುವ ಬಾಗಿಲು. ಈ ಕೋಟೆಯ ಒಳಗಡೆ ಬಾವಿ, ವಸತಿಗೃಹಗಳು, ಮದ್ದಿನ ಮನೆ, ಕಣಜಗಳು ಹಾಗೂ ದೇವಾಲಯದಂತಹ ಕಟ್ಟಡಗಳಿವೆ.

ಈ ಕೋಟೆಯು ಕಲ್ಲು ಮತ್ತು ಇಟ್ಟಿಗೆಗಳಿಂದ ಮಾಡಲ್ಪಟ್ಟ ಕೋಟೆಯು 197.5 ಎಕರೆ (79.9 ಹೆಕ್ಟೇರ್) ಪ್ರದೇಶದಲ್ಲಿ ಹರಡಿದೆ ಮತ್ತು ಕೋಟೆಯು ಕಂದಕದಿಂದ ಸುತ್ತುವರಿದಿದೆ.

ಸಿರಾದ ಅಡಿಪಾಯ ಕೂಡ ಈ ದಂತಕಥೆಯ ಮೇಲೆ ಆಧಾರಿತವಾಗಿದೆ. ಕೋಟೆಯು ಪೂರ್ಣಗೊಳ್ಳುವ ಮೊದಲು, ಸಿರಾ ಮತ್ತು ಅದರ ಸಾಮ್ರಾಜ್ಯಗಳನ್ನು ಬಿಜಾಪುರಿ ಜನರಲ್ ರಂದುಲ್ಲಾ ಖಾನ್ ಕಳುಹಿಸಿದ ಸೈನ್ಯವು ವಶಪಡಿಸಿಕೊಂಡಿತು. ಅವನ ಅಧೀನದ ಅಫ್ಜಲ್ ಖಾನ್ ನೇತೃತ್ವದ ಸೈನ್ಯವು ಸಿರಾ ಮುಖ್ಯಸ್ಥ ಕಸ್ತೂರಿ ರಂಗಪ್ಪ ನಾಯಕನನ್ನು ಸೋಲಿಸಿ ಕೊಂದಿತು. ಆಗ ರಾಜ್ಯಪಾಲರಾಗಿದ್ದ ಮಲಿಕ್ ಹುಸೇನ್ ಅವರು ಕೋಟೆಯ ನಿರ್ಮಾಣವನ್ನು ಪೂರ್ಣಗೊಳಿಸಿದರು ಮತ್ತು ಪಟ್ಟಣವನ್ನು ಸುತ್ತುವರಿದ ಮಣ್ಣಿನ ಗೋಡೆಯನ್ನು ನಿರ್ಮಿಸಿದರು. ಈ ಕೋಟೆ ಬ್ರಿಟೀಷರ ವಶವಾದಾಗ ನಿಯೋಜಿಸಿದಂತಹ ಅಧಿಕಾರಿಗಳ ಸಮಾಧಿಗಳ ಮೇಲೆ ಮರಣದ ದಿನಾಂಕ 14-03-1800 ಎಂದು ನಮೂದಿತವಾಗಿದೆ.

ಭೇಟಿ ನೀಡಿ
ಶಿರಾ ಇತರೆ ಪ್ರವಾಸಿ ಸ್ಥಳಗಳು


ಭೇಟಿ ನೀಡಿ
ತುಮಕೂರು ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು