ಗೂಳೂರು ಕೆರೆ

ಗೂಳೂರು ಕೆರೆ ಕರ್ನಾಟಕದ ತುಮಕೂರು ಜಿಲ್ಲೆಯ ತುಮಕೂರು ತಾಲೂಕಿನಲ್ಲಿ ಇರುವ ಪ್ರಸಿದ್ಧ ಕೆರೆಗಳಲ್ಲೊಂದು. ಇದು ಪ್ರಕೃತಿ ಪ್ರಿಯರಿಗೆ ಆಕರ್ಷಣೆಯಾಗಿದೆ. ಅಲ್ಲಿನ ಹಸಿರು ತೋಟಗಳು ಮತ್ತು ಶಾಂತ ವಾತಾವರಣವು ಪ್ರವಾಸಿಗರಿಗೆ ಮನೋಹರ ಅನುಭವವನ್ನು ನೀಡುತ್ತವೆ. ವಾರದ ರಜಾ ದಿನಗಳಲ್ಲಿ ಪ್ರವಾಸಗೊಳ್ಳಲು ಉತ್ತಮ ಸ್ಥಳವಾಗಿದೆ.

ಈ ಕೆರೆಯು ಬೆಂಗಳೂರಿನಿಂದ 72 ಕಿ.ಮೀ ಮತ್ತು ತುಮುಕೂರು ನಗರದಿಂದ ಕೇವಲ 6 ಕಿ.ಮೀ ದೂರದಲ್ಲಿದೆ.

ಈ ಕೆರೆಯು ಸ್ಥಳೀಯವಾಗಿ ಕೃಷಿಗೆ, ನೀರಿನ ಶೇಖರಣೆಗೆ ಮತ್ತು ಜಲಚರ ಜೀವಿಗಳಿಗೆ ಪ್ರಮುಖ ಪಾತ್ರವಹಿಸುತ್ತಿದೆ. ಕೆರೆಯ ಸುತ್ತಮುತ್ತಲಿನ ಪರಿಸರದ ತಂಪು ವಾತಾವರಣ, ಹಕ್ಕಿಗಳ ಆಗಮನ, ಹಾಗೂ ಪ್ರಕೃತಿಯ ಸೌಂದರ್ಯವನ್ನು ನೋಡಲು ಇದು ಒಂದು ಶಾಂತ ಸ್ಥಳವಾಗಿದೆ. ಕೆಲವೊಮ್ಮೆ ಸ್ಥಳೀಯ ಹಬ್ಬಗಳು ಮತ್ತು ಕಾರ್ಯಕ್ರಮಗಳ ಸಮಯದಲ್ಲಿ ಜನಸಂಚಾರ ಹೆಚ್ಚಾಗುತ್ತದೆ.

ಭೇಟಿ ನೀಡಿ
ತುಮಕೂರು ತಾಲೂಕು ಇತರೆ ಪ್ರವಾಸಿ ಸ್ಥಳಗಳು


ಭೇಟಿ ನೀಡಿ
ತುಮಕೂರು ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು