ಬಿಳಿಕಲ್ಲು ರಂಗಸ್ವಾಮಿ ಬೆಟ್ಟವು ಕರ್ನಾಟಕ ರಾಜ್ಯದ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ಕನಕಪುರ ತಾಲ್ಲೂಕಿನ ಸಮೀಪದಲ್ಲಿರುವ ಒಂದು ಬೆಟ್ಟವಾಗಿದೆ. ಈ ಬೆಟ್ಟದ ಮೇಲೆ ರಂಗನಾಥಸ್ವಾಮಿಯ ದೇವಾಲಯವಿದೆ. ಈ ಬೆಟ್ಟವು ಸಮುದ್ರ ಮಟ್ಟದಿಂದ 3,780 ಅಡಿ (1,152 ಮೀ) ಎತ್ತರದಲ್ಲಿದೆ.
ಈ ಬೆಟ್ಟವು ಬೆಂಗಳೂರಿನಿಂದ 76 ಕಿ.ಮೀ ಮತ್ತು ರಾಮನಗರದಿಂದ 45 ಕಿ.ಮೀ ದೂರದಲ್ಲಿದೆ. ಹಾಗೂ ಕನಕಪುರ ನಗರದಿಂದ ಕೇವಲ 17 ಕಿ.ಮೀ ದೂರದಲ್ಲಿದೆ.
ಬೆಟ್ಟದ ಮೇಲೆ ದೇವಾಲಯವು ದೊಡ್ಡದಾದ ಗ್ರಾನೈಟ್ ಬಂಡೆಯ ಕೆಳಗಿದೆ. ಈ ಬೆಟ್ಟವನ್ನು ಸಾಮಾನ್ಯವಾಗಿ ಜನರು ‘ಬಿಳಿಕಲ್ ಬೆಟ್ಟ’ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಈ ಸ್ಥಳದ ದೇವರ ಮಹಿಮೆಯನ್ನು ಸಾರುವ ಸಲುವಾಗಿ, ಈ ಬೆಟ್ಟದ ಮೇಲ್ಭಾಗದಲ್ಲಿ ಪ್ರತಿ ವರ್ಷ ಜನವರಿ 14ರಂದು ರಂಗನಾಥಸ್ವಾಮಿಯ ಉತ್ಸವವನ್ನು ನಡೆಸಲಾಗುತ್ತದೆ. ಬೆಟ್ಟಕ್ಕೆ ಚಾರಣ ಹೋಗಬಯಸುವವರು ಕನಕಪುರ ಮಾರ್ಗವಾಗಿ ಪ್ರವೇಶಿಸಬಹುದು.
ಭೇಟಿ ನೀಡಿ



