ಬಿಳಿಕಲ್ಲು ರಂಗಸ್ವಾಮಿ ಬೆಟ್ಟ

ಬಿಳಿಕಲ್ಲು ರಂಗಸ್ವಾಮಿ ಬೆಟ್ಟವು ಕರ್ನಾಟಕ ರಾಜ್ಯದ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ಕನಕಪುರ ತಾಲ್ಲೂಕಿನ ಸಮೀಪದಲ್ಲಿರುವ ಪ್ರಸಿದ್ಧ ಬೆಟ್ಟವಾಗಿದೆ. ಈ ಬೆಟ್ಟದ ಮೇಲ್ಭಾಗದಲ್ಲಿ ಶ್ರೀ ರಂಗನಾಥಸ್ವಾಮಿ ದೇವಾಲಯವಿದೆ. ಈ ಬೆಟ್ಟವು ಸಮುದ್ರ ಮಟ್ಟದಿಂದ 3,780 ಅಡಿ (1,152 ಮೀಟರ್) ಎತ್ತರದಲ್ಲಿದೆ.

ಬಿಳಿಕಲ್ಲು ರಂಗಸ್ವಾಮಿ ಬೆಟ್ಟದ ದೂರಗಳು

  • ಬೆಂಗಳೂರು – 76 ಕಿ.ಮೀ
  • ರಾಮನಗರ – 45 ಕಿ.ಮೀ
  • ಕನಕಪುರ – 17 ಕಿ.ಮೀ

ಬೆಟ್ಟದ ಮೇಲ್ಭಾಗದಲ್ಲಿರುವ ಶ್ರೀ ರಂಗನಾಥಸ್ವಾಮಿ ದೇವಾಲಯವು ಬೃಹತ್ ಗ್ರಾನೈಟ್ ಬಂಡೆಯ ಕೆಳಭಾಗದಲ್ಲಿದೆ. ಈ ಬೆಟ್ಟವನ್ನು ಸ್ಥಳೀಯರು ‘ಬಿಳಿಕಲ್ ಬೆಟ್ಟ’ ಎಂದೂ ಕರೆಯುತ್ತಾರೆ. ದೇವರ ಮಹಿಮೆಯನ್ನು ಸ್ಮರಿಸುವ ಉದ್ದೇಶದಿಂದ ಪ್ರತಿ ವರ್ಷ ಜನವರಿ 14ರಂದು ಬೆಟ್ಟದ ಮೇಲ್ಭಾಗದಲ್ಲಿ ಶ್ರೀ ರಂಗನಾಥಸ್ವಾಮಿಯ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಬೆಟ್ಟಕ್ಕೆ ಚಾರಣ ಮಾಡಲು ಬಯಸುವವರು ಕನಕಪುರ ಮಾರ್ಗವಾಗಿ ಈ ಸ್ಥಳವನ್ನು ತಲುಪಬಹುದು.

ಭೇಟಿ ನೀಡಿ
ಕನಕಪುರ ತಾಲ್ಲೂಕಿನ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ಇತರೆ ತಾಲ್ಲೂಕು ಪ್ರವಾಸಿ ಸ್ಥಳಗಳು


Responsive Services Section