ಶ್ರೀ ಚೆನ್ನಕೇಶವ ದೇವಸ್ಥಾನವು ಕರ್ನಾಟಕ ರಾಜ್ಯದ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಕುರುಡುಮಲೆ ಗ್ರಾಮದಲ್ಲಿರುವ ಪ್ರಸಿದ್ಧ ದೇವಾಲಯವಾಗಿದೆ. ಈ ದೇವಾಲಯದ ವಿಶೇಷತೆ ಎಂದರೆ, ಇದರ ಹೊರಾಂಗಣವು ವಿಜಯನಗರ ಸಾಮ್ರಾಜ್ಯದ ಕೃಷ್ಣದೇವರಾಯರ ಕಾಲದಲ್ಲಿ ನಿರ್ಮಾಣಗೊಂಡಿದ್ದು, ಗರ್ಭಗುಡಿಯು ಚೋಳರ ಕಾಲದಲ್ಲಿ ನಿರ್ಮಿಸಲ್ಪಟ್ಟಿದೆ.
ಶ್ರೀ ಚೆನ್ನಕೇಶವ ದೇವಸ್ಥಾನದ ದೂರಗಳು
- ಬೆಂಗಳೂರು – 104 ಕಿ.ಮೀ
- ಕೋಲಾರ – 35 ಕಿ.ಮೀ
- ಮುಳಬಾಗಿಲು – 11 ಕಿ.ಮೀ
- ಕೋಲಾರ ರೈಲ್ವೆ ನಿಲ್ದಾಣ – 35 ಕಿ.ಮೀ
- ಬೆಂಗಳೂರು ವಿಮಾನ ನಿಲ್ದಾಣ – 106 ಕಿ.ಮೀ
ಈ ದೇವಾಲಯವು ಸುಮಾರು 2000 ವರ್ಷಗಳ ಇತಿಹಾಸವನ್ನು ಹೊಂದಿದೆ. ಸುಮಾರು 736 ವರ್ಷಗಳ ಹಿಂದೆ ಇದು ಶಿಥಿಲಾವಸ್ಥೆಗೆ ತಲುಪಿತ್ತು. ನಂತರ, 2022ರ ಮೇ 13ರಂದು ಈ ದೇವಾಲಯವನ್ನು ಅದರ ಮೂಲ ಸ್ಥಿತಿಗೆ ನವೀಕರಿಸಲಾಯಿತು.
ಭೇಟಿ ನೀಡಿ







