ಅಂತರಗಂಗೆ

ಅಂತರಗಂಗೆ ಒಂದು ಪ್ರಸಿದ್ಧ ಧಾರ್ಮಿಕ ಹಾಗೂ ಪ್ರವಾಸಿ ಸ್ಥಳವಾಗಿದ್ದು, ಇದು ಕರ್ನಾಟಕ ರಾಜ್ಯದ ಕೋಲಾರ ಜಿಲ್ಲೆಯ ವಿಭೂತಿಪುರ ಗ್ರಾಮದಲ್ಲಿ ಇದೆ. ಈ ಸ್ಥಳದ ಸಮೀಪದಲ್ಲಿರುವ ಅಂತರಗಂಗೆ ಬೆಟ್ಟವು ಚಾರಣಾಸಕ್ತರಿಗಾಗಿ ಜನಪ್ರಿಯ ಗಿರಿಧಾಮವಾಗಿದೆ. ಈ ಸ್ಥಳವನ್ನು ದಕ್ಷಿಣ ಭಾರತದಲ್ಲಿ “ದಕ್ಷಿಣ ಕಾಶಿ” ಎಂದು ಕರೆಯುತ್ತಾರೆ. ಈ ಬೆಟ್ಟವು ಸಮುದ್ರಮಟ್ಟದಿಂದ ಸುಮಾರು 4026 ಅಡಿ ಎತ್ತರದಲ್ಲಿದೆ.

ಅಂತರಗಂಗೆಯ ದೂರಗಳು

  • ಬೆಂಗಳೂರು – 70 ಕಿ.ಮೀ
  • ಕೋಲಾರ – 4 ಕಿ.ಮೀ
  • ಕೋಲಾರ ರೈಲ್ವೆ ನಿಲ್ದಾಣ – 5 ಕಿ.ಮೀ
  • ಬೆಂಗಳೂರು ವಿಮಾನ ನಿಲ್ದಾಣ – 74 ಕಿ.ಮೀ

ಬೆಟ್ಟದ ಮೇಲೆ ಪುರಾತನವಾದ ಕಾಶಿ ವಿಶ್ವೇಶ್ವರನ ಸನ್ನಿಧಿಯಿದೆ. ವಿಶೇಷವಾದ ಕೆತ್ತನೆಗಳಿಲ್ಲದ ಸರಳ ಗುಡಿಯ ಗರ್ಭಗೃಹದಲ್ಲಿರುವ ಕಾಶಿ ವಿಶ್ವೇಶ್ವರನ ಲಿಂಗವು ಮನಮೋಹಕವಾಗಿದೆ. ಪಕ್ಕದಲ್ಲಿ ಕಲ್ಯಾಣಿ ಇದ್ದು, ಗಣಪತಿಯ ಪುಟ್ಟ ಗುಡಿಯೂ ಇದೆ. ಅದೇ ರೀತಿಯಾಗಿ ಮಂಟಪದಲ್ಲಿ ಎರಡು ನಂದಿಯ ವಿಗ್ರಹಗಳಿದ್ದು, ಅವುಗಳಲ್ಲಿ ಒಂದರ ಬಾಯಿಂದ ನಿರಂತರವಾಗಿ ಜಲಧಾರೆ ಹರಿಯುತ್ತದೆ. ಪಕ್ಕದಲ್ಲೇ ಆಂಜನೇಯನ ಮೂರ್ತಿಯೂ ಇದೆ. ಅಲ್ಲದೆ ಉರುಳುಕಲ್ಲುಗಳಿಂದ ಕೂಡಿದ ಬೆಟ್ಟದ ಮೇಲ್ಭಾಗದಲ್ಲಿ ವೀಕ್ಷಣಾ ಗೋಪುರವೂ ಕಾಣಿಸುತ್ತದೆ.

ಈ ದೇವಾಲಯದ ವಿಶೇಷತೆ ಏನೆಂದರೆ, ಎತ್ತರದ ಬೆಟ್ಟದ ಮೇಲೆ ದೇವಾಲಯದ ಪಕ್ಕದಲ್ಲಿರುವ ಮಂಟಪದಲ್ಲಿ ಪ್ರತಿಷ್ಠಾಪಿತನಾದ ಶಿವನ ವಾಹನವಾದ ಬಸವಣ್ಣನ ಬಾಯಿಂದ ವರ್ಷದ 365 ದಿನಗಳೂ ಸಿಹಿನೀರು ನಿರಂತರವಾಗಿ ಹರಿಯುತ್ತಿರುತ್ತದೆ.ಬರಗಾಲವಾಗಿರಲಿ ಅಥವಾ ಕ್ಷಾಮವೇ ಇರಲಿ, ಇಲ್ಲಿನ ಬಸವನ ಬಾಯಿಂದ ನೀರು ಹರಿಯುತ್ತಲೇ ಇರುತ್ತದೆ. ಆದರೆ ಈ ನಂದಿಯ ಬಾಯಿಂದ ಹರಿಯುವ ನೀರಿನ ಮೂಲ ಎಲ್ಲಿದೆ ಎಂಬುದು ಇಂದಿಗೂ ಯಾರಿಗೂ ತಿಳಿದಿಲ್ಲ.

ಭೇಟಿ ನೀಡಿ
ಕೋಲಾರ ತಾಲೂಕು ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಕೋಲಾರ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section