ಹೊಸಕೋಟೆ ಕೆರೆಯು ಕರ್ನಾಟಕ ರಾಜ್ಯದ ಬೆಂಗಳೂರಿನ ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಪಟ್ಟಣದಲ್ಲಿ ಇರುವ ಸುಂದರವಾದ ಕೆರೆಯಾಗಿದೆ. ಈ ಕೆರೆಯು ವಿಶ್ರಾಂತಿ ಮತ್ತು ಆನಂದಿಸಲು ಉತ್ತಮ ಪಿಕ್ನಿಕ್ ತಾಣವಾಗಿದೆ. ಹೊಸಕೋಟೆ ಕೆರೆಯು ಇದು ಈಗಲೂ ಪಕ್ಷಿಗಳಿಗೆ ಉತ್ತಮ ಸ್ಥಳವಾಗಿದೆ. ಹೊಸಕೋಟೆಯು ಕರ್ನಾಟಕ ರಾಜ್ಯದ ಬೆಂಗಳೂರಿನ ಹೊರವಲಯದ ಒಂದು ಸಣ್ಣ ಪಟ್ಟಣವಾಗಿದೆ.
ಈ ಕೆರೆಯು ಬೆಂಗಳೂರಿನಿಂದ 26 ಕಿ.ಮೀ ಮತ್ತು ಹೊಸಕೋಟೆ ನಗರದ ಹೊರಭಾಗಲ್ಲಿದೆ.
ಬೆಂಗಳೂರಿನಲ್ಲಿ ಪಕ್ಷಿಪ್ರೇಮಿಗಳು ಈ ಕೆರೆಯನ್ನು ಬರ್ಡಿಂಗ್ ಬ್ಲಾಗ್ ಎಂದು ಕರೆಯುವರು. ಈ ಕೆರೆಯು ಒಂದು ದೊಡ್ಡ ಜಲಮೂಲವಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಉತ್ತಮ ಸಂಖ್ಯೆಯ ನೀರಿನ ಪಕ್ಷಿಗಳನ್ನೂ ಆಕರ್ಷಿಸುತ್ತದೆ. ಸ್ಪಾಟ್-ಬಿಲ್ಡ್ ಪೆಲಿಕನ್, ವುಡ್ ಸ್ಯಾಂಡ್‌ಪೈಪರ್, ಕಾಮನ್ ಸ್ಯಾಂಡ್‌ಪೈಪರ್, ಹಸಿರು ಸ್ಯಾಂಡ್‌ಪೈಪರ್ ( ಟ್ರಿಂಗಾ ಓಕ್ರೋಪಸ್ ), ಭಾರತೀಯ ಸ್ಪಾಟ್-ಬಿಲ್ಡ್ ಬಾತುಕೋಳಿ ( ಅನಾಸ್ ಪೊಸಿಲೋರಿಂಚಾ ), ಕಾಮನ್ ಟೀಲ್, ಯುರೇಷಿಯನ್ ವಿಜಿಯನ್, ನಾರ್ದರ್ನ್ ಪಿನ್‌ಟೈಲ್, ನಾರ್ದರ್ನ್ ಶೋವೆಲರ್, ಲಿಟಲ್ ಗ್ರೀಬ್, ಲಿಟಲ್ ಕಾರ್ಮೊರೆಂಟ್, ಇಂಡಿಯನ್ ಕಾರ್ಮೊರೆಂಟ್ ಮತ್ತು ಗ್ರೇಟ್ ಕಾರ್ಮೊರಂಟ್ ( ಫಲಾಕ್ರೊಕೊರಾಕ್ಸ್ ಕಾರ್ಬೊ ). ಕಾಮನ್ ಪೊಚಾರ್ಡ್, ಕಪ್ಪು ಬಾಲದ ಗಾಡ್‌ವಿಟ್‌ಗಳ ಹಿಂಡು , ಬಾತುಕೋಳಿಗಳು, ನೀರಿನ ಕೋಳಿಗಳ ದೊಡ್ಡ ಹಿಂಡುಗಳನ್ನು ನೋಡಬಹುದು. ಬೂದು ಬಕ, ನೇರಳೆ ಬಕ (ಪರ್ಪಲ್ ಹೆರಾನ್), ಇಂಡಿಯನ್ ಪಾಂಡ್-ಹೆರಾನ್, ಕ್ಯಾಟಲ್ ಎಗ್ರೆಟ್, ಸಣ್ಣ ಕೊಕ್ಕರೆ (ಲಿಟಲ್ ಎಗ್ರೆಟ್), ಮಧ್ಯಮ ಬೆಳ್ಳಕ್ಕಿ ( ಆರ್ಡಿಯಾ ಇಂಟರ್ಮೀಡಿಯಾ ) ಸಹ ನೋಡ ಸಿಗುತ್ತದೆ.
ಭೇಟಿ ನೀಡಿ