ಹೊಸಕೋಟೆ ಕೆರೆಯು ಕರ್ನಾಟಕ ರಾಜ್ಯದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಪಟ್ಟಣದಲ್ಲಿ ಇರುವ ಸುಂದರವಾದ ಕೆರೆಯಾಗಿದೆ. ಈ ಕೆರೆಯು ವಿಶ್ರಾಂತಿ ಪಡೆಯಲು ಮತ್ತು ಆನಂದಿಸಲು ಉತ್ತಮ ಪಿಕ್ನಿಕ್ ತಾಣವಾಗಿದೆ. ಹೊಸಕೋಟೆ ಕೆರೆಯು ಈಗಲೂ ಪಕ್ಷಿಗಳಿಗೆ ಉತ್ತಮ ಆಶ್ರಯ ಸ್ಥಳವಾಗಿದೆ. ಹೊಸಕೋಟೆ ಕರ್ನಾಟಕ ರಾಜ್ಯದ ಬೆಂಗಳೂರಿನ ಹೊರವಲಯದಲ್ಲಿರುವ ಒಂದು ಸಣ್ಣ ಪಟ್ಟಣವಾಗಿದೆ.
ಈ ಕೆರೆಯು ಬೆಂಗಳೂರಿನಿಂದ 26 ಕಿ.ಮೀ ದೂರದಲ್ಲಿದ್ದು, ಹೊಸಕೋಟೆ ನಗರದ ಹೊರಭಾಗದಲ್ಲಿದೆ.
ಬೆಂಗಳೂರಿನ ಪಕ್ಷಿಪ್ರೇಮಿಗಳು ಈ ಕೆರೆಯನ್ನು “ಬರ್ಡಿಂಗ್ ಬ್ಲಾಗ್” ಎಂದು ಕರೆಯುತ್ತಾರೆ. ಈ ಕೆರೆಯು ಒಂದು ದೊಡ್ಡ ಜಲಮೂಲವಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಉತ್ತಮ ಸಂಖ್ಯೆಯ ನೀರಿನ ಪಕ್ಷಿಗಳನ್ನು ಆಕರ್ಷಿಸುತ್ತದೆ. ಸ್ಪಾಟ್-ಬಿಲ್ಡ್ ಪೆಲಿಕನ್, ವುಡ್ ಸ್ಯಾಂಡ್‌ಪೈಪರ್, ಕಾಮನ್ ಸ್ಯಾಂಡ್‌ಪೈಪರ್, ಹಸಿರು ಸ್ಯಾಂಡ್‌ಪೈಪರ್ (Tringa ochropus), ಭಾರತೀಯ ಸ್ಪಾಟ್-ಬಿಲ್ಡ್ ಬಾತುಕೋಳಿ (Anas poecilorhyncha), ಕಾಮನ್ ಟೀಲ್, ಯುರೇಷಿಯನ್ ವಿಜಿಯನ್, ನಾರ್ದರ್ನ್ ಪಿಂಟೇಲ್, ನಾರ್ದರ್ನ್ ಶೋವೆಲರ್, ಲಿಟಲ್ ಗ್ರೀಬ್, ಲಿಟಲ್ ಕಾರ್ಮೊರೆಂಟ್, ಇಂಡಿಯನ್ ಕಾರ್ಮೊರೆಂಟ್ ಮತ್ತು ಗ್ರೇಟ್ ಕಾರ್ಮೊರೆಂಟ್ (Phalacrocorax carbo) ಇಲ್ಲಿ ಕಂಡುಬರುತ್ತವೆ. ಕಾಮನ್ ಪೊಚಾರ್ಡ್, ಕಪ್ಪು ಬಾಲದ ಗಾಡ್‌ವಿಟ್‌ಗಳ ಹಿಂಡು, ಬಾತುಕೋಳಿಗಳು ಹಾಗೂ ನೀರಿನ ಕೋಳಿಗಳ ದೊಡ್ಡ ಹಿಂಡುಗಳನ್ನು ನೋಡಬಹುದು. ಬೂದು ಬಕ, ನೇರಳೆ ಬಕ (ಪರ್ಪಲ್ ಹೆರಾನ್), ಇಂಡಿಯನ್ ಪಾಂಡ್-ಹೆರಾನ್, ಕ್ಯಾಟಲ್ ಎಗ್ರೆಟ್, ಸಣ್ಣ ಕೊಕ್ಕರೆ (ಲಿಟಲ್ ಎಗ್ರೆಟ್), ಮಧ್ಯಮ ಬೆಳ್ಳಕ್ಕಿ (Ardea intermedia) ಸಹ ಇಲ್ಲಿ ಕಾಣಿಸಿಕೊಳ್ಳುತ್ತವೆ.
ಭೇಟಿ ನೀಡಿ











