ಕುಂದನ ಬೆಟ್ಟವು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಪಶ್ಚಿಮಕ್ಕೆ ಇದೆ. ದೇವನಹಳ್ಳಿ ಬಳಿಯಿರುವ ಈ ಏಕಶಿಲಾ ಬೆಟ್ಟವು ನೋಡಲು ಅಳಿಲಿನ ಆಕಾರದಲ್ಲಿದೆ. ಈ ಬೆಟ್ಟವು 61 ಮೀಟರ್ ಎತ್ತರ ಮತ್ತು ಸುಮಾರು 100 ಮೀಟರ್ ಉದ್ದ ಮತ್ತು 50 ಮೀಟರ್ ಅಗಲವಿದೆ.
ಈ ಬೆಟ್ಟವು ಬೆಂಗಳೂರಿನಿಂದ 38 ಕಿ.ಮೀ ಮತ್ತು ದೇವನ ಹಳ್ಳಿ ನಗರದಿಂದ ಸುಮಾರು 11 ಕಿ.ಮೀ ದೂರದಲ್ಲಿದೆ.
ಕುಂದನ ಬೆಟ್ಟದ ಇತಿಹಾಸ
1537 CE ರಲ್ಲಿ ಯಲಹಂಕ ನಾಡಿನ ದೊರೆ ಮೊದಲನೆಯ ಕೆಂಪೇಗೌಡ ವಿಜಯನಗರ ಸಾಮ್ರಾಜ್ಯದ ಆದೇಶದ ಮೇರೆಗೆ ಬೆಂಗಳೂರಿನ ನಿರ್ಮಾಣವನ್ನು ಪ್ರಾರಂಭಿಸಿದರು. ಕುಂದನ ಬೆಟ್ಟವು ಆಡಳಿತ ಸೇನಾ ನೆಲೆಯಾಗಿತ್ತು. ಪ್ರಸ್ತುತ ಈ ಸ್ಥಳದಲ್ಲಿ ಚನ್ನರಾಯಸ್ವಾಮಿ ದೇವಾಲಯ ಮತ್ತು ಆಂಜನೇಯಸ್ವಾಮಿ ದೇವಾಲಯವಿದೆ. ವಾರ್ಷಿಕ ಹಬ್ಬಗಳ ಸಂದರ್ಭದಲ್ಲಿ ಸಾವಿರಾರು ಜನರು ಈ ಸ್ಥಳಕ್ಕೆ ಸೇರುತ್ತಾರೆ. ಈ ಸ್ಥಳವು ಕಲ್ಲಿನ ಬೆಟ್ಟದ ಮೇಲೆ ನೆಲೆಗೊಂಡಿದೆ ಮತ್ತು ಸುತ್ತಮುತ್ತಲಿನ ಪ್ರಕೃತಿಯನ್ನು ವೀಕ್ಷಿಸಲು ಸೂಕ್ತವಾಗಿದೆ. ಬೆಟ್ಟದ ಮೇಲೆ ಹೋಗಲು ರಸ್ತೆ ಮಾರ್ಗವಿದೆ. ಬೆಟ್ಟದ ಮೇಲಿನ ದೇವಸ್ಥಾನದ ಮುಂದೆ 15 ಅಡಿ ಎತ್ತರದ ಒಂದು ಪುರಾತನ ಕಂಭವನ್ನು ನಿರ್ಮಿಸಲಾಗಿದೆ. ಬೆಟ್ಟದ ಮೇಲೆ ಸಣ್ಣ ನೀರಿನ ಕೊಳವು ಸಹ ಇದೆ. ಕುಂದನ ಬೆಟ್ಟವು ಭಾಗಶಃ ಬಂಡೆಗಳಿಂದ ಕೂಡಿದೆ.
ಭೇಟಿ ನೀಡಿ