ಕುಂದಾಣ ಬೆಟ್ಟವು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಪಶ್ಚಿಮ ಭಾಗದಲ್ಲಿದೆ. ದೇವನಹಳ್ಳಿ ಬಳಿಯಿರುವ ಈ ಏಕಶಿಲಾ ಬೆಟ್ಟವು ನೋಡಲು ಅಳಿಲಿನ ಆಕಾರದಲ್ಲಿದೆ. ಈ ಬೆಟ್ಟವು 61 ಮೀಟರ್ ಎತ್ತರವಾಗಿದ್ದು, ಸುಮಾರು 100 ಮೀಟರ್ ಉದ್ದ ಮತ್ತು 50 ಮೀಟರ್ ಅಗಲವಿದೆ.
ಕುಂದಾಣ ಬೆಟ್ಟದ ದೂರಗಳು
- ಬೆಂಗಳೂರು – 38 ಕಿ.ಮೀ
- ದೇವನಹಳ್ಳಿ – 11 ಕಿ.ಮೀ
ಕುಂದಾಣ ಬೆಟ್ಟದ ಇತಿಹಾಸ
ಕ್ರಿ.ಶ. 1537ರಲ್ಲಿ ಯಲಹಂಕ ನಾಡಿನ ದೊರೆ ಮೊದಲನೆಯ ಕೆಂಪೇಗೌಡರು ವಿಜಯನಗರ ಸಾಮ್ರಾಜ್ಯದ ಆದೇಶದ ಮೇರೆಗೆ ಬೆಂಗಳೂರಿನ ನಿರ್ಮಾಣವನ್ನು ಪ್ರಾರಂಭಿಸಿದರು. ಕುಂದಾಣ ಬೆಟ್ಟವು ಆಗ ಆಡಳಿತ ಮತ್ತು ಸೇನಾ ನೆಲೆಯಾಗಿತ್ತು. ಪ್ರಸ್ತುತ ಈ ಸ್ಥಳದಲ್ಲಿ ಚನ್ನರಾಯಸ್ವಾಮಿ ದೇವಾಲಯ ಮತ್ತು ಆಂಜನೇಯಸ್ವಾಮಿ ದೇವಾಲಯಗಳಿವೆ. ವರ್ಷದಲ್ಲಿ ಬರುವ ಹಬ್ಬಗಳ ಸಂದರ್ಭದಲ್ಲಿ ಸಾವಿರಾರು ಜನರು ಈ ಸ್ಥಳಕ್ಕೆ ಸೇರುತ್ತಾರೆ. ಈ ಸ್ಥಳವು ಕಲ್ಲಿನ ಬೆಟ್ಟದ ಮೇಲೆ ನೆಲೆಗೊಂಡಿದ್ದು, ಸುತ್ತಮುತ್ತಲಿನ ಪ್ರಕೃತಿಯನ್ನು ವೀಕ್ಷಿಸಲು ಅತ್ಯಂತ ಸೂಕ್ತವಾಗಿದೆ. ಬೆಟ್ಟದ ಮೇಲಕ್ಕೆ ಹೋಗಲು ರಸ್ತೆ ಮಾರ್ಗವಿದೆ. ಬೆಟ್ಟದ ಮೇಲಿರುವ ದೇವಸ್ಥಾನದ ಮುಂದೆ ಸುಮಾರು 15 ಅಡಿ ಎತ್ತರದ ಪುರಾತನ ಕಂಬವೊಂದನ್ನು ನಿರ್ಮಿಸಲಾಗಿದೆ. ಬೆಟ್ಟದ ಮೇಲೊಂದು ಸಣ್ಣ ನೀರಿನ ಕೊಳವೂ ಇದೆ. ಕುಂದಾಣ ಬೆಟ್ಟವು ಭಾಗಶಃ ಬಂಡೆಗಳಿಂದ ಕೂಡಿದೆ.
ಭೇಟಿ ನೀಡಿ









