ದೊಡ್ಡ ಸಂಪಿಗೆ ಮರ ಅಥವಾ ದೊಡ್ಡ ಚಂಪಕ ಮರ, ಇದು ಕರ್ನಾಟಕ ರಾಜ್ಯದ ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗ ಬೆಟ್ಟಗಳ ಹೃದಯಭಾಗದಲ್ಲಿರುವ ಪವಿತ್ರ ಮತ್ತು ಪುರಾತನ ಮರವಾಗಿದೆ. ಈ ಮರವು ಸುಮಾರು 34 ಮೀ ಎತ್ತರವಾಗಿದೆ ಮತ್ತು ಸುಮಾರು 20 ಮೀ ಅಗಲವಿದೆ. ಇದನ್ನು 600 ವರ್ಷಗಳಷ್ಟು ಹಳೆಯದು ಎಂದು ನಂಬಲಾಗಿದೆ ಮತ್ತು ಈ ಮರವನ್ನು ಇಲ್ಲಿನ ಮೂಲನಿವಾಸಿಗಳಾದ ಸೋಲಿಗ ಬುಡಕಟ್ಟು ಜನಾಂಗದವರು ಪೂಜಿಸುತ್ತಾರೆ. ಮರದ ಕಾಂಡದ ಸಂಪೂರ್ಣ ದೊಡ್ಡ ಗಾತ್ರದಿಂದ ಒಂದು ಅದ್ಭುತವಾದ ಹಾಗೂ ವಿಶೇಷವಾದ ದೊಡ್ಡ ಸಂಪಿಗೆ ಮರವಾಗಿದೆ.
ದೊಡ್ಡ ಸಂಪಿಗೆ ಮರ ಬೆಂಗಳೂರಿನಿಂದ 193 ಕಿ.ಮೀ, ಮೈಸೂರಿನಿಂದ ಸುಮಾರು 91 ಕಿ.ಮೀ, ಮತ್ತು ಚಾಮರಾಜನಗರದಿಂದ 36 ಕಿ.ಮೀ ದೂರದಲ್ಲಿದೆ. ಹಾಗೂ ಕೊಳ್ಳೇಗಾಲದಿಂದ 43 ಕಿ.ಮೀ ದೂರದಲ್ಲಿದೆ, ಬಿಳಿಗಿರಿರಂಗ ದೇವಸ್ಥಾನದಿಂದ ಕೇವಲ 10 ಕಿ.ಮೀ ದೂರದಲ್ಲಿದೆ.
ಇಲ್ಲಿರುವ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರವು ಬುಡಕಟ್ಟು ಸಂರಕ್ಷಿತೇ, ಮಾಹಿತಿ ಮತ್ತು ಪ್ರದೇಶದ ಜೀವವೈವಿಧ್ಯವನ್ನು ಪ್ರದರ್ಶಿಸುತ್ತದೆ. ಇಲ್ಲಿನ ಮತ್ತೊಂದು ಆಕರ್ಷಣೆ ಹೊನ್ನಮೆಟ್ಟಿ ಕಲ್ಲು – ಬೆಟ್ಟದ ಮೇಲಿರುವ ಬಂಡೆ. ದೊಡ್ಡ ಸಂಪಿಗೆ ಮರವು ಶ್ರೀ ಬಿಳಿಗಿರಿ ರಂಗನಾಥ ಸ್ವಾಮಿ (BR Hiils) ದೇವಾಲಯದ ವ್ಯಾಪ್ತಿಯಲ್ಲಿ ಬರುತ್ತದೆ. ಈ ಮರದ ಸಮೀಪದಲ್ಲಿ ಹಲವಾರು ಲಿಂಗಗಳನ್ನು ಇರಿಸಿರುವುದನ್ನು ಕಾಣಬಹುದು. ಅದಕ್ಕಾಗಿಯೇ ಇದನ್ನು ಶಿವನಿಗೆ ಹೋಲಿಸಲಾಗಿದೆ. ಏಪ್ರಿಲ್ ತಿಂಗಳಲ್ಲಿ, ಈ ಮರವು ಕೆಂಪು ಹಳದಿ ಬಣ್ಣದ ಹೂವುಗಳನ್ನು ಬಿಡುತ್ತದೆ. ಸೋಲಿಗ ಬುಡಕಟ್ಟು ಜನಾಂಗದವರಿಗೆ, ದೊಡ್ಡ ಸಂಪಿಗೆ ಮರ ಮಹಾ ಶಿವರಾತ್ರಿಯ ಸಂದರ್ಭದಲ್ಲಿ ಅಗ್ನಿ ನೃತ್ಯ ಮಾಡುವ ದೇವರು ಆಗಿದೆ. ಇಲ್ಲಿ ಸಾಮಾನ್ಯವಾಗಿ ಸೋಲಿಗ ಬುಡಕಟ್ಟು ಜನಾಂಗದವರ ಜೀವನಶೈಲಿಯನ್ನು ಪ್ರತಿನಿಧಿಸುತ್ತದೆ, ಇದು ಪ್ರಕೃತಿ ತಾಯಿಯಯೊಂದಿಗಿನ ಅವರ ಸಂಬಂಧವನ್ನು ತೋರಿಸುತ್ತದೆ. ಇಲ್ಲಿನ ಮೂಲನಿವಾಸಿಗಳಿಗೆ ಇದು ಬಹಳ ಮಹತ್ವದ್ದಾಗಿದೆ.
ದೊಡ್ಡ ಸಂಪಿಗೆ ಮರದ ಹಿರಿಮೆಗೆ ಸ್ಥಳಾಕೃತಿ ಮತ್ತು ಭವ್ಯವಾದ ಉಪಸ್ಥಿತಿಯು, ಪರಿಸರ ಪ್ರವಾಸೋದ್ಯಮ, ಪರಿಸರ ಸ್ನೇಹಿ ,ವನ್ಯಜೀವಿ ಛಾಯಾಗ್ರಹಣ, ಟ್ರೆಕ್ಕಿಂಗ್ ಪ್ರವಾಸಿಗರು, ಮತ್ತು ಸ್ಥಳೀಯ ಸಮುದಾಯಗಳ ಸಾಂಸ್ಕೃತಿಕ ಮಹತ್ವವನ್ನು ಅನ್ವೇಷಿಸುವ ಉತ್ಸಾಹಿಗಳನ್ನು ನಿರಂತರವಾಗಿ ಸೆಳೆಯುತ್ತದೆ. ಹೆಚ್ಚಿನ ಪಕ್ಷಿ ವೀಕ್ಷಣೆ ಮತ್ತು ವನ್ಯಜೀವಿ ಸಫಾರಿಗಳಂತಹ ಚಟುವಟಿಕೆಗಲಿಂದ ವಿಶೇಷವಾಗಿದೆ. ಇಲ್ಲಿ ಟ್ರೆಕ್ಕಿಂಗ್ ಮಾಡಲು ಅನೇಕ ಮಾರ್ಗಗಳನ್ನು ಒಳಗೊಂಡಿದೆ.
ಭೇಟಿ ನೀಡಿ