ಗಗನಚುಕ್ಕಿ ಜಲಪಾತವು ಕರ್ನಾಟಕ ರಾಜ್ಯದ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನಲ್ಲಿ ಇರುವ ಜಲಪಾತವಾಗಿದೆ. ಗಗನಚುಕ್ಕಿ ಕಾವೇರಿ ನದಿಯ ದಡದಲ್ಲಿರುವ ಶಿವನಸಮುದ್ರ ದ್ವೀಪದ ಸುತ್ತ ಹರಿದು ಬೆರಗುಗೊಳಿಸುವ ಒಂದು ಜಲಪಾತವಾಗಿದೆ. ಶಿವನಸಮುದ್ರ ದ್ವೀಪದ ಸುತ್ತಲೂ ಹರಿಯುವ ಕಾವೇರಿ ನದಿಯು, ಎರಡು ಕವಲುಗಳಾಗಿ ವಿಭಜನೆಗೊಳ್ಳುತ್ತದೆ. ಹೀಗೆ ವಿಭಜನೆಗೊಂಡ ಕಾವೇರಿ ನದಿಯು, ಎಡ ಭಾಗಕ್ಕೆ ಹರಿದು 90 ಮೀಟರ್ ಎತ್ತರದಿಂದ ಕೆಳಗೆ ಧುಮ್ಮಿಕುವ ಜಲಪಾತವೇ ಈ ಗಗನಚುಕ್ಕಿ ಜಲಪಾತವಾಗಿದೆ. ಅವಳಿ ಜಲಪಾತಗಳಾದ ಭರಚುಕ್ಕಿ ಮತ್ತು ಗಗನಚುಕ್ಕಿ ಇಲ್ಲಿನ ಗಮನ ಸೆಳೆಯುತ್ತದೆ.
ಗಗನಚುಕ್ಕಿ ಜಲಪಾತವು ಬೆಂಗಳೂರಿನಿಂದ 138 ಕಿ.ಮೀ ಮತ್ತು ಮೈಸೂರಿನಿಂದ ಸುಮಾರು 75 ಕಿ.ಮೀ ದೂರದಲ್ಲಿದೆ. ಹಾಗೂ ಕೊಳ್ಳೇಗಾಲ ನಗರದಿಂದ 21 ಕಿ.ಮೀ ಮತ್ತು ಮಳವಳ್ಳಿ ನಗರದಿಂದ 28 ಕಿ.ಮೀ ದೂರದಲ್ಲಿದೆ.
ಈ ಜಲಪಾತಗಳ ಬಗ್ಗೆ ಸಾಮಾನ್ಯ ಕಲ್ಪನೆಯೆಂದರೆ ಬಲಭಾಗವನ್ನು ಗಗನಚುಕ್ಕಿ ಮತ್ತು ಎಡಭಾಗವನ್ನು ಭರಚುಕ್ಕಿ ಎಂದು ಕರೆಯಲಾಗುತ್ತದೆ. ವಾಸ್ತವದಲ್ಲಿ ಗಗನಚುಕ್ಕಿ ಜಲಪಾತವು ಕೆಲವೇ ಕಿಲೋಮೀಟರ್ ದೂರದಲ್ಲಿದೆ. ಧುಮ್ಮಿಕ್ಕುವ ಹರಿಯುವ ಗಗನಚುಕ್ಕಿವು ಜಲಪಾತದ ನೋಟ ರುದ್ರರಮಣೀಯವಾಗಿ ನಿಮ್ಮನ್ನು ವಿಸ್ಮಯಗೊಳಿಸುತ್ತವೆ.
1902 ರಲ್ಲಿ ಏಷ್ಯಾದ ಮೊದಲ ಜಲವಿದ್ಯುತ್ ಉತ್ಪಾದನಾ ಕೇಂದ್ರವನ್ನು ಶಿವನಸಮುದ್ರದಲ್ಲಿ ಪ್ರಾರಂಭಿಸಲಾಯಿತು. ಈ ಯೋಜನೆಯನ್ನು ಮೈಸೂರು ಸಾಮ್ರಾಜ್ಯದ ದಿವಾನ್ ಶೇಷಾದ್ರಿ ಅಯ್ಯರ್ ಸ್ಥಾಪಿಸಿದರು.
ಕಾವೇರಿ ವನ್ಯಜೀವಿ ಅಭಯಾರಣ್ಯದ ದಟ್ಟವಾದ ಕಾಡುಗಳಿಂದ ಸುತ್ತುವರೆದಿರುವ ಸಾಟಿಯಿಲ್ಲದ ಸೌಂದರ್ಯದೊಂದಿಗೆ ಅದ್ಭುತವಾದ ಜಲಪಾತಗಳು ಪ್ರಶಾಂತತೆಯಲ್ಲಿ ಸಮಯ ಕಳೆಯಲು ಸೂಕ್ತವಾದ ಸ್ಥಳವಾಗಿದೆ ಮತ್ತು ಇದು ಪರಿಪೂರ್ಣ ಪಿಕ್ನಿಕ್ ತಾಣವಾಗಿದೆ. ಜಲಪಾತಗಳು ವಿಶ್ವದ ಅತ್ಯುತ್ತಮ ಜಲಪಾತಗಳಲ್ಲಿ ಒಂದಾಗಿದೆ ಮತ್ತು ವೀಕ್ಷಣೆಗೆ ಆಕರ್ಷಕ ಮತ್ತು ಅದ್ಭುತವಾಗಿವೆ.
ಭೇಟಿ ನೀಡಿ