ಶ್ರೀ ಹುಲಿಗಿನ ಮುರಡಿ ವೆಂಕಟರಮಣ ಸ್ವಾಮಿ ದೇವಸ್ಥಾನ

ಹುಲಿಗಿನ ಮರಡಿ ಸ್ವಾಮಿ ದೇವಸ್ಥಾನ ಕರ್ನಾಟಕ ರಾಜ್ಯದ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ಕಿಲ್ಲಗೆರೆ ಗ್ರಾಮದಲ್ಲಿ ಬೆಟ್ಟದ ಮೇಲೆ ಇರುವ ದೇವಸ್ಥಾನವಾಗಿದೆ. ಇದು ಶ್ರೀನಿವಾಸ ದೇವರಿಗೆ ಪ್ರಸಿದ್ದವಾದ ದೇವಾಲಯವಾಗಿದೆ. ಇದನ್ನು ಹುಲಿಗಾದ್ರಿ, ದಕ್ಷಿಣ ಶೇಷಾದ್ರಿ ಮತ್ತು ವ್ಯಾಗ್ರಾಚಲ ಎಂದೂ ಕರೆಯುತ್ತಾರೆ. ಇದು ಬೆಟ್ಟದ ಮೇಲಿದ್ದು ಸಮುದ್ರ ಮಟ್ಟದಿಂದ ಸುಮಾರು 1050 ಮೀಟರ್ ಎತ್ತರದಲ್ಲಿದೆ.

ಈ ದೇವಾಲಯವು ಬೆಂಗಳೂರಿನಿಂದ 201 ಕಿ.ಮೀ ಮತ್ತು ಮೈಸೂರಿನಿಂದ ಸುಮಾರು 79 ಕಿ.ಮೀ ದೂರದಲ್ಲಿದೆ. ಹಾಗೂ ಗುಂಡ್ಲುಪೇಟೆ ನಗರದಿಂದ 20 ಕಿ.ಮೀ ಮತ್ತು ಚಾಮರಾಜನಗರ ದಿಂದ 45 ಕಿ.ಮೀ ದೂರದಲ್ಲಿದೆ.

ಈ ದೇವಾಲಯವು ಸಮಯ ಬೆಳ್ಳಿಗ್ಗೆ 9:00 ರಿಂದ ಸಂಜೆ 7:30 ರವರೆಗೆ ತೆರೆದಿರುತ್ತದೆ.

ದೇವಸ್ಥಾನದ ರಾಜಗೋಪರವು ಆಕರ್ಷಕವಾಗಿದ್ದು, ಮೂಲ ಗೋಪುರವು ಭವ್ಯವಾಗಿದೆ. ಖಾಸಗಿ ವಾಹನದಲ್ಲಿ ಬೆಟ್ಟದ ತುದಿಯವರೆಗೆ ಹೋಗಬಹುದು ಮತ್ತು ಮೆಟ್ಟಿಲುಗಳನ್ನು ಸಹ ಹತ್ತುಲು ಅವಕಾಶವಿದೆ. ಸುಂದರ ದೃಶ್ಯಾವಳಿಗಳಿಂದ ಕೂಡಿದೆ ಮತ್ತು ಸುತ್ತಲ ಪ್ರದೇಶವನ್ನು ವೀಕ್ಷಣೆ ಮಾಡಲು ಹಾಗು ಪ್ರ ಶಾಂತ ವಾತಾವರಣ ಅನುಭವಿಸಲು ಒಂದು ಒಳ್ಳೆಯ ಸ್ಥಳವಾಗಿದೆ.

ಭೇಟಿ ನೀಡಿ
ಗುಂಡ್ಲುಪೇಟೆ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಚಾಮರಾಜನಗರ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section