ಶ್ರೀ ವರದರಾಜ ಸ್ವಾಮಿಯ ದೇವಾಲಯವು ಹಳೆಯ ಇತಿಹಾಸದ ಅದ್ಭುತ ದೇವಾಲವಾಗಿದೆ. ಶ್ರೀ ವರದರಾಜ ಸ್ವಾಮಿ ದೇವಾಲಯವನ್ನು 14 ನೇ ಶತಮಾನದಲ್ಲಿ ಪೆರುಮಾಳ್ ದಾನ ನಾಯಕನ ಮಗ ಮಾಧವ ದಂಡನಾಯಕನು ನಿರ್ಮಿಸಿದ ದೇವಾಲಯವಾಗಿದೆ. ಈ ದೇವಾಲಯಕ್ಕೆ ವರದರಾಜ ಸ್ವಾಮಿ ದೇವಾಲಯವೆಂದು ಇತಿಹಾಸವಿದೆ. ಕರ್ನಾಟಕದ ರಾಜ್ಯದ ಚಾಮರಾಜನಗರ ಜಿಲ್ಲೆಯ ತೆರಕಣಾಂಬಿ ಗ್ರಾಮದಲ್ಲಿ ಪ್ರಾಚೀನ ಶಿವ ಮತ್ತು ವಿಷ್ಣುವೀಣೆ ದೇವಾಲಯದ ದೇವಾಲವಾಗಿದೆ.
ಶ್ರೀ ವರದರಾಜ ಸ್ವಾಮಿ ದೇವಾಲಯವು ಬೆಂಗಳೂರಿನಿಂದ 215 ಕಿ.ಮೀ ಮತ್ತು ಮೈಸೂರಿನಿಂದ ಸುಮಾರು 70 ಕಿ.ಮೀ ದೂರದಲ್ಲಿದೆ. ಹಾಗೂ ಚಾಮರಾಜನಗರದಿಂದ 24 ಕಿ.ಮೀ ಮತ್ತು ಗುಂಡ್ಲುಪೇಟೆಯಿಂದ ಕೇವಲ 10 ಕಿ.ಮೀ ದೂರದಲ್ಲಿದೆ.
ಈ ದೇವಾಲಯದ ದರ್ಶನದ ಸಮಯ ಬೆಳ್ಳಿಗ್ಗೆ 7:00 ರಿಂದ ಮಧ್ಯಾಹ್ನ 12 :00 ರವರೆಗೆ ಮತ್ತು ಸಂಜೆ 4:00 ರಿಂದ ರಾತ್ರಿ 8.30 ರವರೆಗೆ ತೆರೆದಿರುತ್ತದೆ.
ಶ್ರೀ ವರದರಾಜ ಸ್ವಾಮಿ ದೇವಾಲಯವು 40 ಅಡಿ ಎತ್ತರದ ದೀಪಸ್ತಂಭದೊಂದಿಗೆ ಮುಖಮಾಡಿದೆ. ರಾಜಗೋಪುರದ ತಳವು ಗರ್ಭಗುಡಿಯ ಮುಂಭಾಗದಲ್ಲಿದೆ ಮತ್ತು ಪುರಾತನ ರಚನೆಯ ದೇವಾಲವಾಗಿದೆ. ಗರ್ಭಗುಡಿಯ ಆವರಣವು ವಿಷ್ಣುವಿನ ವಿವಿಧ ರೂಪಗಳು ಮತ್ತು ಅವತಾರಗಳ ಗಾರೆ ಚಿತ್ರಗಳೊಂದಿಗೆ ಕಮಾನುಗಳನ್ನು ಹೊಂದಿದೆ.
ದೇವಾಲಯವು ಗರ್ಭಗುಡಿ, ಅಂತರಾಳ, ಅರ್ಥಮಂಟಪ ಮತ್ತು ಮುಖ ಮಂಟಪ ಗಳನ್ನು ಹೊಂದಿದೆ. ಮೂಲ ವಿಗ್ರಹ ಶ್ರೀ ವರದರಾಜ ಸ್ವಾಮಿಗಳು ನಿಂತಿರುವ ಭಂಗಿಯಲ್ಲಿದ್ದಾರೆ. ಅರ್ಚಕರು ಮತ್ತು ಆಳ್ವಾರರು ಅರ್ಥಮಂಟಪದಲ್ಲಿದ್ದಾರೆ. ಬಲಿಪೀಠ ಮತ್ತು ದ್ವಜಸ್ತಂಭ ಮುಖ ಮಂಟಪದಲ್ಲಿದೆ. ದೇವಿಯ ಮೂರ್ತಿಯು ಮೂಲ ಶ್ರೀ ವರದರಾಜ ಸ್ವಾಮಿಯ ಬಲಭಾಗದಲ್ಲಿದೆ. ವಿನಾಯಕ, ಗರುಡ ಮತ್ತು ಆಂಜನೇಯ ಮೂರ್ತಿ ಮುಖ ಮಂಟಪದ ಸನ್ನಧಿಯಲ್ಲಿ ನೆಲೆಸಿದ್ದಾರೆ.
ಈ ತೆರಕಣಾಂಬಿಯನ್ನು ಕದಂಬ, ಚೋಳ, ಹೊಯ್ಸಳ, ವಿಜಯನಗರ ಮತ್ತು ಮೈಸೂರು ರಾಜರು ಆಳಿದರು. ಮೈಸೂರು ರಾಜ ಶ್ರೀ ರಣಧೀರ ಕಂಠೀರವ (1638 ರಿಂದ 1713 AD) ರಲ್ಲಿ ಬಂದವರು ಮತ್ತು ತಮ್ಮ ಬಾಲ್ಯದ ದಿನಗಳನ್ನು ಈ ಗ್ರಾಮದಲ್ಲಿ ಕಳೆದರು ಎಂಬ ಪುರಾವೆಯಿದೆ. ಅವರ ಆಳ್ವಿಕೆಯಲ್ಲಿ ಅವರು ತನ್ನ ಪ್ರದೇಶವನ್ನು ಮಧುರೈವರೆಗೆ ವಿಸ್ತರಿಸಿದನು. ವಿಜಯನಗರ ಕಾಲದಲ್ಲಿ ಮತ್ತಷ್ಟು ವಿಸ್ತರಿಸಿತು.
ತೆರಕಣಾಂಬಿಯಲ್ಲಿ 12 ಪುರಾತನ ದೇವಾಲಯಗಳಿದ್ದು, 09 ದೇವಾಲಯಗಳು ಈಗ ಜೀವಂತವಾಗಿವೆ. ದೇವಾಲಯದ ದಕ್ಷಿಣ ಭಾಗವನ್ನು ಕೃಷ್ಣರಾಜ ಒಡೆಯರ್ ಕಾಲದಲ್ಲಿ ಜಿರ್ಣೋದ್ದಾರ ಮಾಡಿದರು.
ಭೇಟಿ ನೀಡಿ