ಬೇಲೂರು ಚೆನ್ನಕೇಶವ ದೇವಸ್ಥಾನ

ಚೆನ್ನಕೇಶವ ದೇವಾಲಯವು ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯ ಬೇಲೂರಿನಲ್ಲಿ ಇರುವ, 12ನೇ ಶತಮಾನದ ಹೊಯ್ಸಳ ಸಾಮ್ರಾಜ್ಯದ ಕಾಲದಲ್ಲಿ ನಿರ್ಮಿಸಲಾದ ಪ್ರಸಿದ್ಧ ಹಿಂದೂ ದೇವಸ್ಥಾನವಾಗಿದೆ. ಈ ದೇವಾಲಯವನ್ನು ಚೆನ್ನಕೇಶವ ದೇವಾಲಯ ಅಥವಾ ಬೇಲೂರಿನ ವಿಜಯನಾರಾಯಣ ದೇವಾಲಯ ಎಂದೂ ಕರೆಯಲಾಗುತ್ತದೆ. ಬೇಲೂರಿನ ಯಗಚಿ ನದಿಯ ದಡದಲ್ಲಿ ಇರುವ ಈ ದೇವಾಲಯವನ್ನು ರಾಜ ವಿಷ್ಣುವರ್ಧನನು ನಿರ್ಮಿಸಿದನು.

ಈ ದೇವಾಲಯವು ಬೆಂಗಳೂರಿನಿಂದ ಸುಮಾರು 220 ಕಿ.ಮೀ, ಹಾಸನ ನಗರದಿಂದ ಸುಮಾರು 38 ಕಿ.ಮೀ (NH 373 ಮೂಲಕ) ಹಾಗೂ 47 ಕಿ.ಮೀ (NH 73 ಮತ್ತು SH 21 ಮೂಲಕ), ಹಾಗು ಹಾಸನ ರೈಲ್ವೆ ನಿಲ್ದಾಣದಿಂದ ಸುಮಾರು 41 ಕಿ.ಮೀ ದೂರದಲ್ಲಿದೆ.

ಈ ದೇವಾಲಯವು ಪ್ರತಿದಿನ ಬೆಳಿಗ್ಗೆ 7:00 ರಿಂದ ಸಂಜೆ 7:30 ರವರೆಗೆ ತೆರೆದಿರುತ್ತದೆ.

ಭೇಟಿ ನೀಡಿ
ಬೇಲೂರು ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಹಾಸನ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section