ವಾಟೆಹೊಳೆ ಅಣೆಕಟ್ಟು ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯ ಆಲೂರ್ ತಾಲೂಕಿನಲ್ಲಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಹರಿಯುವ ಯಗಚಿ ನದಿಯ ಉಪನದಿಯಾದ ವೋಟೆಹೊಳೆ ನದಿಗೆ ಅಡ್ಡಲಾಗಿ ಕಟ್ಟಿರುವ ಆಣೆಕಟ್ಟು ಆಗಿದೆ. ಈ ಅಣೆಕಟ್ಟು 1985 ರಲ್ಲಿ ಪೂರ್ಣಗೊಂಡಿತು. ಈ ಅಣೆಕಟ್ಟು ಕರ್ನಾಟಕದ ಹಾಸನ ನಗರದ ಸಮೀಪವಿರುವ ಲಕ್ಕೇನಹಳ್ಳಿ ಗ್ರಾಮದಲ್ಲಿದೆ. ಅಣೆಕಟ್ಟನ್ನು ಪ್ರಾಥಮಿಕವಾಗಿ ಸುತ್ತಮುತ್ತಲಿನ ಪ್ರದೇಶಗಳ ನೀರಾವರಿ ಉದ್ದೇಶಕ್ಕಾಗಿ ಬಳಸಲಾಗುತ್ತದೆ.
ವಾಟೆಹೊಳೆ ಅಣೆಕಟ್ಟು ಬೆಂಗಳೂರಿನಿಂದ ಸುಮಾರು 214 ಕಿ.ಮೀ ಮತ್ತು ಹಾಸನ ನಗರದಿಂದ 34 ಕಿ.ಮೀ ದೂರದಲ್ಲಿದೆ. ಹಾಗೂ ಆಲೂರ್ ತಾಲೂಕಿನಿಂದ 20 ಕಿ.ಮೀ ಮತ್ತು ಹಾಸನ ರೈಲ್ವೆ ನಿಲ್ದಾಣದಿಂದ 35 ಕಿ.ಮೀ ದೂರದಲ್ಲಿದೆ.
ಅಣೆಕಟ್ಟಿನ ಜಲಾನಯನ ಪ್ರದೇಶವು 11TH ಹೆಕ್ಟೇರ್ನಲ್ಲಿ ಹರಡಿದೆ. ಅಣೆಕಟ್ಟು 900 ಮೀಟರ್ ಉದ್ದವನ್ನು ಹೊಂದಿದೆ. ಅಣೆಕಟ್ಟಿನ ಗರಿಷ್ಠ ಎತ್ತರವು ಅಡಿಪಾಯದಿಂದ 44.48 ಮೀಟರ್ ಆಗಿದೆ. ಅಣೆಕಟ್ಟಿನ ಪೂರ್ಣ ಜಲಾಶಯದ ಮಟ್ಟ (FRL) 966 ಮೀಟರ್ ಎತ್ತರಕ್ಕೆ ವಿಸ್ತರಿಸಿದೆ. ಅಣೆಕಟ್ಟು 03 ರೇಡಿಯಲ್ ಸ್ಪಿಲ್ವೇ ಗೇಟ್ಗಳನ್ನು ಹೊಂದಿದ್ದು ಪ್ರತಿಯೊಂದೂ 9.14 x 4.57 ಚದರ ಮೀಟರ್ ಗಾತ್ರವನ್ನು ಹೊಂದಿದೆ. ವಾಟೆಹೊಳೆ ಅಣೆಕಟ್ಟು ಮತ್ತು ಜಲಾಶಯವು ಕಾವೇರಿ ನೀರಾವರಿ ನಿಗಮ ಲಿಮಿಟೆಡ್ನ ಒಡೆತನದಲ್ಲಿದೆ ಮತ್ತು ನಿರ್ವಹಿಸುತ್ತದೆ. ಈ ಅಣೆಕಟ್ಟಿನಿಂದ ಆಲೂರು ಮತ್ತು ಬೇಲೂರಿನಲ್ಲಿ 18500 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ.
ಭೇಟಿ ನೀಡಿ
ಭೇಟಿ ನೀಡಿ