ಗೋಕಾಕ್ ಜಲಪಾತ

ಗೋಕಾಕ್ ಜಲಪಾತವು ಕರ್ನಾಟಕ ರಾಜ್ಯದ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನಲ್ಲಿ ಇರುವ ಪ್ರಸಿದ್ಧ ಜಲಪಾತವಾಗಿದೆ. ಘಟಪ್ರಭ ನದಿಯಿಂದ ಉಂಟಾಗುವ ಈ ಜಲಪಾತವು ಕರ್ನಾಟಕದ ಎರಡನೇ ಅತಿ ದೊಡ್ಡ ಜಲಪಾತವಾಗಿದೆ. ಈ ಜಲಪಾತವನ್ನು ಕರ್ನಾಟಕದ ಮಿನಿ ನಯಾಗರ ಜಲಪಾತ ಎಂದು ಸಹ ಕರೆಯುತ್ತಾರೆ.

ಈ ಜಲಪಾತವು ಬೆಂಗಳೂರು ನಿಂದ 540 ಕಿ.ಮೀ ದೂರದಲ್ಲಿದೆ ಮತ್ತು ಬೆಳಗಾವಿಯಿಂದ 56 ಕಿ.ಮೀ ದೂರದಲ್ಲಿದೆ. ಹಾಗೂ ಗೋಕಾಕ್ ನಗರದಿಂದ 7 ಕಿ.ಮೀ ಮತ್ತು ಗೋಕಾಕ್ ರೋಡ್ ರೈಲ್ವೆ ನಿಲ್ದಾಣದಿಂದ 5 ಕಿ.ಮೀ ದೂರದಲ್ಲಿದೆ.

ಈ ಜಲಪಾತವು ೧೫೦ ಮೀಟರ್ ಎತ್ತರದಿಂದ ಧುಮುಕುತ್ತದೆ. ಗೋಕಾಕ್ ಜಲಪಾತವು ಅಮೇರಿಕ ದೇಶದ ನಯಾಗರ ಜಲಪಾತವನ್ನು ಹೊಲುವುದರಿಂದ ಇದನ್ನು ಭಾರತದ ನಯಾಗಾರವೆಂದು ಕರೆಯಲಾಗುತ್ತದೆ. ಘಟಪ್ರಭ ನದಿಯು ಸುತ್ತ-ಮುತ್ತಲ ಹಳ್ಳಿಗಳಿಗೆ ಜೀವಾದರೆಯಾಗಿದೆ ಮತ್ತು ಕೃಷಿ ಚಟುವಟಿಕೆಗಳಿಗೆ ಮೂಲಾಧಾರವಾಗಿದೆ.