ಟಿಪ್ಪು ಸುಲ್ತಾನನ ಜನ್ಮಸ್ಥಳ

ಮೈಸೂರಿನ ಹುಲಿ ಎಂದೂ ಕರೆಯಲ್ಪಡುವ ಟಿಪ್ಪು ಸುಲ್ತಾನನ ಜನ್ಮಸ್ಥಳವು ಕರ್ನಾಟಕ ರಾಜ್ಯದ ಬೆಂಗಳೂರಿನ ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಕೋಟೆಯ ಸಮೀಪದಲ್ಲಿದೆ. ಟಿಪ್ಪು ಸುಲ್ತಾನ್ 1751 ರಲ್ಲಿ ದೇವನಹಳ್ಳಿಯಲ್ಲಿ ಜನಿಸಿದರು. ಟಿಪ್ಪು ಸುಲ್ತಾನನ ಜನ್ಮಸ್ಥಳವು ದೇವನಹಳ್ಳಿ ಕೋಟೆಗೆ ಬಹಳ ಹತ್ತಿರದಲ್ಲಿದೆ, ಇದು ಒಂದು ಚಿಕ್ಕ ಆವರಣದಿಂದ ಕೂಡಿದ್ದು, ಇದು ಟಿಪ್ಪು ಸುಲ್ತಾನನ ಜನ್ಮಸ್ಥಳ ಎಂದು ಘೋಷಿಸುವ ಕಲ್ಲಿನ ಫಲಕವನ್ನು ಹೊಂದಿದೆ. ಆವರಣದ ಸುತ್ತಲಿನ ಪ್ರದೇಶವನ್ನು ಖಾಸ್ ಬಾಗ್ ಎಂದು ಕರೆಯಲಾಗುತ್ತದೆ.

ಈ ಜನ್ಮಸ್ಥಳವು ಬೆಂಗಳೂರಿನಿಂದ 36 ಕಿ.ಮೀ ಮತ್ತು ದೇವನಹಳ್ಳಿ ನಗರದ ಹೃದಯಭಾಗಲ್ಲಿದೆ.

ಒಂದು ಸಣ್ಣ ಫಲಕವನ್ನು ಹೊಂದಿರುವ ಸ್ಮಾರಕವು ಕೋಟೆಯ ಹೊರಗೆ 150 ಮೀ ನೈಋತ್ಯಕ್ಕೆ ನಿರ್ಮಿತವಾಗಿದೆ, ಇದು ನಾಲ್ಕು ಕಂಬದ ಆವರಣ ಮತ್ತು ಚೌಕಾಕಾರದ ಮೇಲ್ಭಾಗ ಮತ್ತು ಮೇಲ್ಚಾವಣಿಗಳೊಂದಿಗೆ ಸುಮಾರು 12 ಅಡಿ ಎತ್ತರವಿದೆ. ಇದು ಒಂದು ಕಲ್ಲಿನಿಂದ ನಿರ್ಮಿತ ಪ್ರದೇಶ. ಇದರ ಸಮೀಪ ಬತ್ತಿದ ಕಲ್ಲಿನ ಕೊಳ, ಬಾಳೆ, ಹುಣಸೆ ಮತ್ತು ಮಾವಿನ ತೋಟಗಳನ್ನು ಹೊಂದಿದೆ. ಕೋಟೆಯ ಹೊರಗೆ ಮತ್ತು ಟಿಪ್ಪು ಸುಲ್ತಾನನ ಜನ್ಮಸ್ಥಳದಲ್ಲಿರುವ ಭಾರತೀಯ ಪುರಾತತ್ವ ಸಮೀಕ್ಷೆ (ASI) ಮಂಡಳಿಯು ಅವುಗಳನ್ನು ಸಂರಕ್ಷಿತ ಸ್ಮಾರಕಗಳು (ರಾಷ್ಟ್ರೀಯ ಪರಂಪರೆ) ಎಂದು ಘೋಷಿಸುತ್ತದೆ.

ಭೇಟಿ ನೀಡಿ
ದೇವನಹಳ್ಳಿ ಇತರೆ ಪ್ರವಾಸಿ ಸ್ಥಳಗಳು


ಭೇಟಿ ನೀಡಿ
ಬೆಂಗಳೂರು ಗ್ರಾಮಾಂತರ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು