ಬಾಣಂತಿಮರಿ ಬೆಟ್ಟವು ಕರ್ನಾಟಕ ರಾಜ್ಯದ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ಕನಕಪುರ ತಾಲೂಕಿನ ಡೊಳ್ಳಹಳ್ಳಿ ಗ್ರಾಮದ ಹತ್ತಿರ ಇರುವ ಬೆಟ್ಟವಾಗಿದೆ. ಈ ಬೆಟ್ಟದ ಬುಡದಲ್ಲಿ ಶ್ರೀ ಬಾಣಂತಿ ಮಾರಿ ಅಮ್ಮನ ದೇವಾಲಯವಿದೆ ಮತ್ತು ಬೆಟ್ಟದ ಮೇಲೆ ಆಂಜನೇಯ ಸ್ವಾಮಿ ದೇವಾಲಯವಿದೆ. ಟ್ರೆಕ್ಕಿಂಗ್‌ಗೆ ಅದ್ಭುತವಾದ ಸ್ಥಳವಾಗಿದೆ. ಬೆಟ್ಟದ ಮೇಲಿನಿಂದ ಕಾಣುವ ನೋಟ ಸುಂದರವಾಗಿದೆ. ಈ ಸ್ಥಳವು ಬಾಣಂತಿಮರಿ ರಾಜ್ಯ ಅರಣ್ಯ, ರಾಮನಗರ ಅರಣ್ಯ ವ್ಯಾಪ್ತಿಗೆ ಒಳಪಡುತ್ತದೆ.
ಈ ಬೆಟ್ಟವು ಬೆಂಗಳೂರಿಂದ 62 ಕಿ.ಮೀ ಮತ್ತು ರಾಮನಗರದಿಂದ 27 ಕಿ.ಮೀ ದೂರದಲ್ಲಿದೆ. ಹಾಗೂ ಕನಕಪುರದಿಂದ ಕೇವಲ 06 ಕಿ.ಮೀ ದೂರದಲ್ಲಿದೆ.
ಈ ಚಾರಣವು ಒಂದು ನಿರ್ಜನ, ವಿಲಕ್ಷಣ ಹಳ್ಳಿಯ ಮೂಲಕ ಕರೆದೊಯ್ಯುವ ಮೂಲಕ, ಅದರ ಶಾಂತತೆಯಲ್ಲಿ ಬಹುತೇಕ ಪಾರಮಾರ್ಥಿಕವೆನಿಸುತ್ತದೆ. ಪ್ರಕೃತಿಯ ಸೌಂದರ್ಯದ ಹೊಸ ದೃಷ್ಟಿಕೋನವನ್ನು ನೀಡುವ ಮತ್ತು ಬೆರಗುಗೊಳಿಸುವ ವಿಹಂಗಮ ನೋಟಗಳನ್ನು ಚಾರಣಿಗರಿಗೆ ಒಂದು ಅದ್ಬುತ ಸ್ಥಳವಾಗಿದೆ.