ಬಿಳಿಕಲ್ಲು ರಂಗಸ್ವಾಮಿ ಬೆಟ್ಟವು ಕರ್ನಾಟಕ ರಾಜ್ಯದ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ಕನಕಪುರ ತಾಲೂಕಿನ ಸಮೀಪವಿರುವ ಬೆಟ್ಟವಾಗಿದೆ. ಈ ಬೆಟ್ಟದ ಮೇಲೆ ರಂಗನಾಥ ಸ್ವಾಮಿಯ ದೇವಾಲಯವಿದೆ. ಈ ಬೆಟ್ಟವು ಸಮುದ್ರ ಮಟ್ಟದಿಂದ 3780 ಅಡಿ (1152 ಮೀ) ಎತ್ತರದಲ್ಲಿದೆ.
ಈ ಬೆಟ್ಟವು ಬೆಂಗಳೂರಿಂದ 76 ಕಿ.ಮೀ ಮತ್ತು ರಾಮನಗರದಿಂದ 45 ಕಿ.ಮೀ ದೂರದಲ್ಲಿದೆ. ಹಾಗೂ ಕನಕಪುರ ನಗರದಿಂದ ಕೇವಲ 17 ಕಿ.ಮೀ ದೂರದಲ್ಲಿದೆ.
ಬೆಟ್ಟದ ಮೇಲೆ ದೇವಾಲಯವು ದೊಡ್ಡದಾದ ಗ್ರಾನೈಟ್ ಬಂಡೆಯ ಕೆಳಗೆ ಇದೆ. ಈ ಬೆಟ್ಟವನ್ನು ಸಾಮನ್ಯವಾಗಿ ಜನರು ಬಿಳಿಕಲ್ ಬೆಟ್ಟ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಈ ಸ್ಥಳದ ದೇವರ ಮಹಿಮೆಯನ್ನು ಸಾರುವ ಸಲುವಾಗಿ ಈ ಬೆಟ್ಟದ ಮೇಲ್ಭಾಗದಲ್ಲಿ ಪ್ರತಿ ವರ್ಷಕ್ಕೊಮ್ಮೆ ಜನವರಿ 14 ರಂದು ರಂಗನಾಥ ಸ್ವಾಮಿಯ ಉತ್ಸವನ್ನು ನಡೆಸಲಾಗುತ್ತದೆ. ಬೆಟ್ಟಕ್ಕೆ ಚಾರಣ ಹೋಗಬಯಸುವವರು ಕನಕಪುರದ ಮಾರ್ಗವಾಗಿ ಪ್ರವೇಶಿಸಬಹುದು.
ಭೇಟಿ ನೀಡಿ



