ಅಲ್ಲಮಪ್ರಭು ಗದ್ದುಗೆಮಠವು ಕರ್ನಾಟಕ ರಾಜ್ಯದ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಮೊರ್ಖಂಡಿ ಗ್ರಾಮದಲ್ಲಿ ಇರುವ ಮಠವಾಗಿದೆ. ಈ ಮಠವು 12ನೇ ಶತಮಾನದ ಪ್ರಸಿದ್ಧ ವಚನಕಾರರಾದ ಅಲ್ಲಮಪ್ರಭುಗಳಿಗೆ ಸಮರ್ಪಿತವಾಗಿದೆ.
ಈ ಸ್ಥಳವು ಬೆಂಗಳೂರಿನಿಂದ 715 ಕಿ.ಮೀ (NH50 ಮೂಲಕ), 730 ಕಿ.ಮೀ (NH44 – ಹೈದರಾಬಾದ್ ಮೂಲಕ), ಬೀದರ್‌ನಿಂದ 80 ಕಿ.ಮೀ ಮತ್ತು ಬಸವಕಲ್ಯಾಣದಿಂದ 1.5 ಕಿ.ಮೀ ದೂರದಲ್ಲಿದೆ.
ಹರಳಯ್ಯ ಗವಿಯಿಂದ ಮುಂದೆ ಹೋದಾಗ ಬಲಗಡೆಲ್ಲದೆ ಅಲ್ಲಮಪ್ರಭು ಗದ್ದುಗೆಮಠ ಇದೆ. ಈ ಮಠ ಕರಿಕಲ್ಲಿನಿಂದ ನಿರ್ಮಿತವಾಗಿದ್ದು ಸುಂದರವಾಗಿ ಕಾಣುತ್ತದೆ. ಅಲ್ಲಮಪ್ರಭುಗಳು ಬಸವಕಲ್ಯಾಣಕ್ಕೆ ಬಂದಾಗ ಇಲ್ಲಿ ಕುಳಿತು ಪೂಜೆ ಸಲ್ಲಿಸುತ್ತಿದ್ದರು ಎಂದು ಹೇಳಲಾಗುತ್ತದೆ. ಮಠವು ವಿಶಾಲವಾಗಿದ್ದು, ಚಿಕ್ಕ ಬಾಗಿಲುಗಳಿರುವ ಕೋಣೆಗಳೂ ಇವೆ. ಹಿತ್ತಲಿನ ಪ್ರದೇಶದಲ್ಲಿ ಒಂದು ಸುಂದರ ಬಾವಿಯೂ ಇದೆ. ಪ್ರಸ್ತುತ ಈ ಮಠವನ್ನು ಬಸವೇಶ್ವರ ದೇವಾಲಯ ಸಮಿತಿಯ ಜನರು ನಿರ್ವಹಿಸುತ್ತಿದ್ದಾರೆ.
ಭೇಟಿ ನೀಡಿ





