ಚಿದಂಬರಶ್ರಮ ಸಿದ್ಧಾರೂಢ ಮಠ

ಚಿದಂಬರ ಆಶ್ರಮ ಶ್ರೀ ಸಿದ್ದಾರೂಢ ಮಠ (ಗುಂಪಾ)ವು ಕರ್ನಾಟಕ ರಾಜ್ಯದ ಬೀದರ್ ಜಿಲ್ಲೆಯ ಬೀದರ್ ತಾಲ್ಲೂಕಿನ ಮನ್ನಳ್ಳಿ ರಸ್ತೆಯಲ್ಲಿ ಇರುವ ಮಠ ಮತ್ತು ದೇವಾಲಯವಾಗಿದೆ. ಈ ಮಠವನ್ನು 1986ರಲ್ಲಿ ಶ್ರೀ ಶಿವಕುಮಾರ್ ಸ್ವಾಮೀಜಿಯವರು ನಿರ್ಮಿಸಿದರು. ಕಳೆದ ಮೂರು ದಶಕಗಳಿಂದ ಶ್ರೀ ಸಿದ್ದಾರೂಢ ಮಠ ಗುಂಪಾ ಧಾರ್ಮಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಚಟುವಟಿಕೆಗಳ ಕೇಂದ್ರವಾಗಿಯೂ ಕಾರ್ಯನಿರ್ವಹಿಸುತ್ತಿದೆ.

ಈ ಮಠವು ಬೆಂಗಳೂರಿನಿಂದ 751 ಕಿ.ಮೀ (NH50 — ಕರ್ನಾಟಕದ ಮೂಲಕ), 678 ಕಿ.ಮೀ (NH44 — ಹೈದರಾಬಾದ್ ಮೂಲಕ) ದೂರದಲ್ಲಿದ್ದು, ಕೇಂದ್ರ ಬಸ್ ನಿಲ್ದಾಣ ಬೀದರ್‌ನಿಂದ 3 ಕಿ.ಮೀ ಹಾಗೂ ಬೀದರ್ ರೈಲ್ವೆ ನಿಲ್ದಾಣದಿಂದ 4 ಕಿ.ಮೀ ದೂರದಲ್ಲಿ ಇದೆ.

ಶ್ರೀ ಸಿದ್ದಾರೂಢ ಪ್ರತಿಮೆಯ ಎರಡೂ ಬದಿಗಳಲ್ಲಿ 12 ಜ್ಯೋತಿರ್ಲಿಂಗಗಳಿವೆ. ಶ್ರೀ ಶಿವಕುಮಾರ್ ಸ್ವಾಮೀಜಿವರು ಶ್ರಾವಣ ಮಾಸ (ಜುಲೈ), ನವರಾತ್ರಿ ಹಾಗೂ ಪ್ರತಿ ಭಾನುವಾರ ಸಂಜೆ ಪ್ರವಚನ ನೀಡುತ್ತಾರೆ. ಅವರ ಮಾರ್ಗದರ್ಶನದಲ್ಲಿ ಅನೇಕ ಭಕ್ತರು ಆಧ್ಯಾತ್ಮಿಕ ಹಸಿವನ್ನು ನೀಗಿಸಿಕೊಂಡಿದ್ದಾರೆ. ಬೀದರಿನ ಪವಿತ್ರ ಸ್ಥಳಗಳಿಗೆ ಭೇಟಿ ನೀಡುವ ಸಂದರ್ಶಕರು ಅಥವಾ ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡದಿದ್ದರೆ ಅವರ ಯಾತ್ರೆ ಅಪೂರ್ಣವೆನಿಸುತ್ತದೆ.

ಪ್ರತಿ ವರ್ಷ ಸದ್ಗುರು ಸಿದ್ದಾರೂಢ ಹಾಗೂ ಶಿವಕುಮಾರ ಮಹಾಸ್ವಾಮೀಜಿ ಜಯಂತಿಯನ್ನು ಆಚರಿಸಲು ಭಾರತದ ವಿಭಿನ್ನ ಭಾಗಗಳಿಂದ ಅನೇಕ ಭಕ್ತರು ಇಲ್ಲಿ ಆಗಮಿಸುತ್ತಾರೆ. ಈ ಆಚರಣೆಯನ್ನು ವಿಶೇಷವಾಗಿ ನವೆಂಬರ್ ತಿಂಗಳಲ್ಲಿ ನೆರವೇರಿಸಲಾಗುತ್ತದೆ.

ಭೇಟಿ ನೀಡಿ
ಬೀದರ್ ತಾಲೂಕು ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಬೀದರ್ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section