ಗುರುದ್ವಾರ ಶ್ರೀ ಭಾಯಿ ಸಾಹಿಬ್ ಸಿಂಗ್ ಮಂದಿರವು ಭಾಯಿ ಸಾಹಿಬ್ ಸಿಂಗ್ ಅವರ ಸ್ಮರಣಾರ್ಥ ನಿರ್ಮಿಸಲ್ಪಟ್ಟಿದ್ದು, ಕರ್ನಾಟಕ ರಾಜ್ಯದ ಬೀದರ್ ಜಿಲ್ಲೆಯ ಬೀದರ್ ತಾಲ್ಲೂಕಿನ ಜನವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸಿಖ್ ಮಂದಿರವಾಗಿದೆ.
ಗುರುದ್ವಾರ ಪ್ಯಾರೆ ಭಾಯಿ ಸಾಹಿಬ್ ಸಿಂಗ್ ಜಿನ ದೂರಗಳು
- ಬೆಂಗಳೂರು – 683 ಕಿ.ಮೀ
- ಬೀದರ್ – 9 ಕಿ.ಮೀ
- ಬೀದರ್ ರೈಲ್ವೆ ನಿಲ್ದಾಣ – 10 ಕಿ.ಮೀ
- ಬೀದರ್ ವಿಮಾನ ನಿಲ್ದಾಣ – 13 ಕಿ.ಮೀ
ಭಾಯಿ ಸಾಹಿಬ್ ಸಿಂಗ್ ಅವರು ಪಂಜ್ ಪ್ಯಾರೆ (ಐದು ಪ್ರೀತಿಪಾತ್ರರು)ಗಳಲ್ಲಿ ಒಬ್ಬರಾಗಿದ್ದರು. ಅವರನ್ನು ಹಿಂದೆ ಸಾಹಿಬ್ ಚಂದ್ ಎಂದು ಕರೆಯಲಾಗುತ್ತಿತ್ತು. ಅವರು 16ನೇ ವಯಸ್ಸಿನಲ್ಲಿ ಆನಂದಪುರದಲ್ಲಿ ಖಾಲ್ಸಾಗೆ ದೀಕ್ಷೆ ಪಡೆದ ಮೊದಲ ಐವರಲ್ಲಿ ಒಬ್ಬರಾಗಿದ್ದರು. ಭಾಯಿ ಸಾಹಿಬ್ ಸಿಂಗ್ ಅವರು ನಾಯ್ (ಕ್ಷೌರಿಕ) ಕುಟುಂಬಕ್ಕೆ ಸೇರಿದವರಾಗಿದ್ದರು.
ಸಾಹಿಬ್ ಸಿಂಗ್ ಅವರ ಜನ್ಮಸ್ಥಳ ಮತ್ತು ಕುಟುಂಬ ಸದಸ್ಯರ ಕುರಿತು ವಿಭಿನ್ನ ಆವೃತ್ತಿಗಳಿವೆ. ಆದರೆ ಎಲ್ಲರೂ ಒಪ್ಪಿಕೊಂಡಿರುವ ಅಂಶವೆಂದರೆ, ಅವರು ನಾಯ್ ಕುಟುಂಬದಲ್ಲಿ ಜನಿಸಿದ್ದರು. ಅವರ ಜನ್ಮಸ್ಥಳದ ಕುರಿತು ಪ್ರಸಿದ್ಧ ನಂಬಿಕೆಯ ಪ್ರಕಾರ, ಭಾಯಿ ಸಾಹಿಬ್ ಸಿಂಗ್ ಅವರು ಬೀದರ್ ಅಥವಾ ಅದರ ಸಮೀಪದ ಪ್ರದೇಶದಲ್ಲಿ ಜನಿಸಿದ್ದರು.
ಭಾಯಿ ಸಾಹಿಬ್ ಸಿಂಗ್ ಅವರು ತಮ್ಮ ಶೌರ್ಯಕ್ಕೆ ಪ್ರಸಿದ್ಧರಾಗಿದ್ದರು. ಆನಂದಪುರದಲ್ಲಿ ನಡೆದ ಯುದ್ಧದಲ್ಲಿ ಅವರು ಗುಜ್ಜರ್ ಮುಖ್ಯಸ್ಥ ಜಮಾತುಲ್ಲಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದರು ಎಂದು ಹೇಳಲಾಗುತ್ತದೆ. ಮತ್ತೊಂದು ಯುದ್ಧದಲ್ಲಿ ಹಿಂದೂರ್ ರಾಜ ಭೂಪ್ ಚಂದ್ ಮಸ್ಕೆಟ್‌ನ ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡನು. ಇದರಿಂದ ಇಡೀ ಬೆಟ್ಟದ ಸೈನ್ಯವು ಯುದ್ಧಭೂಮಿಯಿಂದ ಓಡಿಹೋಯಿತು.
1699ರ ಮಾರ್ಚ್ 30ರಂದು ವೈಶಾಖಿ ದಿನದಂದು, ಗುರು ಗೋಬಿಂದ್ ಸಿಂಗ್ ಅವರ ಕರೆಯನ್ನು ಅನುಸರಿಸಿ ತಮ್ಮ ತಲೆಯನ್ನು ಅರ್ಪಿಸಲು ಮುಂದಾದ ಐದು ಸಿಖ್ಖರಲ್ಲಿ ಭಾಯಿ ಸಾಹಿಬ್ ಸಿಂಗ್ ಒಬ್ಬರಾಗಿದ್ದರು. ಅವರನ್ನು ಗುರು ಗೋಬಿಂದ್ ಸಿಂಗ್ ತಮ್ಮ ಐವರು ಪ್ರೀತಿಪಾತ್ರರಲ್ಲಿ ಒಬ್ಬರೆಂದು ಸ್ವಾಗತಿಸಿದರು. ಈ ಐವರು ಖಾಲ್ಸಾದ ಕೇಂದ್ರಬಿಂದುವಾಗಿದ್ದರು. ಖಾಲ್ಸಾದ ವಿಧಿವಿಧಾನಗಳನ್ನು ಅನುಸರಿಸಿದ ನಂತರ ಸಾಹಿಬ್ ಚಂದ್ ಅವರು ಸಾಹಿಬ್ ಸಿಂಗ್ ಆದರು ಮತ್ತು ಖಾಲ್ಸಾದ ಎಲ್ಲ ಸದಸ್ಯರಿಗೆ ಸಾಮಾನ್ಯವಾಗಿದ್ದ “ಸಿಂಗ್” ಎಂಬ ಬಿರುದನ್ನು ಪಡೆದರು.
ಭೇಟಿ ನೀಡಿ







