ನಾರಾಯಣಪುರದಲ್ಲಿರುವ ಶಿವ ದೇವಾಲಯವು ಶಿವನಿಗೆ ಅರ್ಪಿತವಾದ ಒಂದು ಪ್ರಮುಖ ಹಿಂದೂ ದೇವಾಲಯವಾಗಿದೆ. ಕರ್ನಾಟಕ ರಾಜ್ಯದ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕನ ನಾರಾಯಣಪುರ ಗ್ರಾಮದಲ್ಲಿದೆ. 12 ನೇ ಶತಮಾನದಲ್ಲಿ ಚಾಲುಕ್ಯ ರಾಜವಂಶರಿಂದ ನಿರ್ಮಿಸಲ್ಪಟ್ಟ ಒಂದು ದೇವಾಲಯವಾಗಿದೆ.
ಈ ದೇವಾಲಯವು ಬೆಂಗಳೂರಿನಿಂದ 715 ಕಿ.ಮೀ (NH50 ಮೂಲಕ), 734 ಕಿ.ಮೀ (NH 44 ಹೈದರಾಬಾದ್ ಮೂಲಕ) ಮತ್ತು ಬೀದರ್ ನಿಂದ 83 ಕಿ.ಮೀ ದೂರದಲ್ಲಿದೆ. ಹಾಗೂ ಬಸವಕಲ್ಯಾಣದಿಂದ 4 ಕಿ.ಮೀ ದೂರದಲ್ಲಿದೆ.
ಈ ದೇವಾಲಯವು ಪುರಾತನ ಇತಿಹಾಸವುಳ್ಳ ಹಾಗೂ ಐತಿಹಾಸಿಕ ವೀರಶಿಲೆಗಳು ಮತ್ತು ಅಪ್ಸರೆಯರ ಆಕೃತಿಗಳು ಹಾಗೂ ವಿಷ್ಣು ಮತ್ತು ನರಸಿಂಹನಂತಹ ವಿವಿಧ ದೇವರುಗಳ ಆಂತರಿಕ ಚಿತ್ರಣಗಳನ್ನು ಒಳಗೊಂಡ ಸಂಕೀರ್ಣವು ಬಾಹ್ಯ ಶಿಲ್ಪಗಳಿಗೆ ಹೆಸರುವಾಸಿಯಾಗಿದೆ. ಕನ್ನಡ ಶಾಸನಗಳನ್ನು ಹೊಂದಿರುವ ಚಪ್ಪಡಿ ಮತ್ತು ಹೊರ ಗೋಡೆಗಳ ಮೇಲೆ ಶಿಲ್ಪಗಳ ಕೆತ್ತನೆ ಮತ್ತು ಕಂಬಗಳ ಮೇಲೆ ಹೂವಿನ ವಿನ್ಯಾಸಗಳ ಕೆತ್ತನೆಗಳನ್ನು ಮತ್ತು ಇತರ ದೇವರುಗಳ ಚಿತ್ರಣಗಳಿಂದ ಕೂಡಿದೆ. ಈ ದೇವಾಲಯವು ಗರ್ಭಗೃಹ ಮತ್ತು ಸಭಾಂಗಣ ಮಂಟಪಗಳನ್ನು ಒಳಗೊಂಡಿದೆ. ದೇವಾಲಯದ ಒಳಗಿನ ಛಾವಣಿಗಳು ಸುಂದರವಾದ ಹೂವಿನ ವಿನ್ಯಾಸಗಳನ್ನು ಹೊಂದಿವೆ.
ನರಸಿಂಹನು ಹಿರಣ್ಯಕಶಿಪುವನ್ನು ವಧಿಸುವ ಮತ್ತು ವಿಷ್ಣು ಹಾಗೂ ಲಕ್ಷ್ಮಿಯ ಅನೇಕ ಶಿಲ್ಪಕೃತಿಗಳನ್ನು ಒಳಗೊಂಡಿದೆ. ದೇವಾಲಯದ ಹೊರಗಿನ ಗೋಡೆಯ ಸುತ್ತಲೂ ಸುಂದರವಾದ ಸಾಲಭಂಜಿಕ ಪ್ರತಿಮೆಗಳಿವೆ.
ಭೇಟಿ ನೀಡಿ







