ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಾಲಯವು ಕರ್ನಾಟಕ ರಾಜ್ಯದ ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನಲ್ಲಿ ಇರುವ ಹಿಂದೂ ಶೈವ ದೇವಾಲಯವಾಗಿದೆ ಮತ್ತು ಪ್ರಸಿದ್ಧ ಧಾರ್ಮಿಕ ತಾಣವಾಗಿದೆ. ಈ ದೇವಾಲಯವು ವಿಶಿಷ್ಟವಾದ ಚಲಿಸುವ ಕಂಬ ಮತ್ತು 50 ಅಡಿ ದೀಪ ಸ್ತಂಭಗಳನ್ನು ಒಳಗೊಂಡಂತೆ ಅದ್ಭುತ ವಾಸ್ತುಶಿಲ್ಪವನ್ನು ಹೊಂದಿದೆ.
ಈ ದೇವಾಲಯವು ಬೆಂಗಳೂರಿನಿಂದ 701 ಕಿ.ಮೀ (NH 44 ಹೈದರಾಬಾದ್ ಮೂಲಕ) ಮತ್ತು ಬೀದರ್ ನಿಂದ 52 ಕಿ.ಮೀ ದೂರದಲ್ಲಿದೆ. ಹಾಗೂ ಹುಮ್ನಾಬಾದ್ ನಿಂದ 2 ಕಿ.ಮೀ ಮತ್ತು ಹುಮ್ನಾಬಾದ್ ರೈಲ್ವೆ ನಿಲ್ದಾಣದಿಂದ 2 ಕಿ.ಮೀ ದೂರದಲ್ಲಿ ಇದೆ.
ಸುಮಾರು 300 ವರ್ಷಗಳ ಹಿಂದೆ, 1725ರಲ್ಲಿ ರಾಜಾ ರಾಮಚಂದ್ರ ಜಾಧವ್ ಅವರು ಈ ದೇವಾಲಯವನ್ನು ನಿರ್ಮಿಸಿದ್ದರೆಂದು ಹೇಳಲಾಗುತ್ತದೆ. ಈ ದೇವಾಲಯವು ಸುಂದರ ಗೋಪುರ, ವಿಶಾಲ ಪ್ರಾಂಗಣ ಮತ್ತು ಕಲ್ಯಾಣಿಯನ್ನು ಹೊಂದಿದೆ.
ಶಿವನ ಒಂದು ರೂಪವಾದ ಶ್ರೀ ವೀರಭದ್ರೇಶ್ವರ ಸ್ವಾಮಿ ಇಲ್ಲಿ ನೆಲೆಸಿದ್ದು, ವಿಗ್ರಹದ ಗರ್ಭಗುಡಿ ಅದ್ಭುತವಾಗಿದೆ. ಈ ದೇವಾಲಯವು ತುಂಬಾ ಸೊಗಸಾಗಿ ಮತ್ತು ಸುಂದರವಾಗಿ ಕಾಣುತ್ತದೆ. ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ ಮತ್ತು ಮಹಾರಾಷ್ಟ್ರದಿಂದ ಅನೇಕ ಭಕ್ತರನ್ನು ಆಕರ್ಷಿಸುತ್ತದೆ. ದಸರಾ ನವರಾತ್ರಿ ಉತ್ಸವದ ದಿನಗಳು ಮತ್ತು ಜಾತ್ರಾ ದಿನಗಳಲ್ಲಿ ಭಾರಿ ಜನಸಂದಣಿ ಕಂಡುಬರುತ್ತದೆ.
ಭೇಟಿ ನೀಡಿ




