ಪಿ.ಜಿ. ಪಾಳ್ಯ ಸಫಾರಿ ಕೇಂದ್ರವು ಕರ್ನಾಟಕ ರಾಜ್ಯದ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಲೊಕ್ಕನಹಳ್ಳಿ ಗ್ರಾಮದಲ್ಲಿದೆ. ಈ ಸಫಾರಿ ಕೇಂದ್ರವು ಕಾವೇರಿ ವನ್ಯಜೀವಿ ಸಫಾರಿ (ಗೋಪಿನಾಥಂ), ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಬಿಆರ್‌ಟಿ (BRT) ಹುಲಿ ಸಂರಕ್ಷಿತ ಪ್ರದೇಶಗಳ ನಂತರ ಅರಣ್ಯ ಇಲಾಖೆ ಆರಂಭಿಸಿದ ನಾಲ್ಕನೇ ವನ್ಯಜೀವಿ ಸಫಾರಿ ಕೇಂದ್ರವಾಗಿದೆ.
ಪಿಜಿ ಪಾಳ್ಯ ವನ್ಯಜೀವಿ ಸಫಾರಿ ದೂರಗಳು
- ಬೆಂಗಳೂರು – 161 ಕಿ.ಮೀ
- ಚಾಮರಾಜನಗರ – 66 ಕಿ.ಮೀ
- ಮೈಸೂರು – 88 ಕಿ.ಮೀ
- ಕೊಳ್ಳೇಗಾಲ – 26 ಕಿ.ಮೀ
- ಚಾಮರಾಜನಗರ ರೈಲ್ವೆ ನಿಲ್ದಾಣ – 65 ಕಿ.ಮೀ
- ಮೈಸೂರು ವಿಮಾನ ನಿಲ್ದಾಣ – 95 ಕಿ.ಮೀ
ಸಫಾರಿ ವಿವರಗಳು
- ವೆಚ್ಚ: ಒಬ್ಬರಿಗೆ ₹400. ಸಾಕಷ್ಟು ಪ್ರಯಾಣಿಕರು ಇಲ್ಲದಿದ್ದರೆ ಜೀಪ್‌ಗೆ ಪೂರ್ಣ ಶುಲ್ಕ ₹2,500 ವಿಧಿಸಲಾಗುತ್ತದೆ.
- ಸಮಯ: ಬೆಳಿಗ್ಗೆ 6:00 ಗಂಟೆ ಮತ್ತು ಮಧ್ಯಾಹ್ನ 3:00 ಗಂಟೆ.
- ಅವಧಿ: 1.5 ರಿಂದ 2 ಗಂಟೆಗಳು.
ಸ್ಥಳ
ಪಿಜಿ ಪಾಳ್ಯ ವನ್ಯಜೀವಿ ಸಫಾರಿ ಕೇಂದ್ರ ಲೋಕನಹಳ್ಳಿ
ಬುಕಿಂಗ್ ಸಂಪರ್ಕ: ಫೋನ್ ಮೂಲಕ ಬುಕಿಂಗ್‌ಗಾಗಿ 9481995509 ಅನ್ನು ಸಂಪರ್ಕಿಸಿ.
ಭೇಟಿ ನೀಡಿ




