ಭರಚುಕ್ಕಿ ಜಲಪಾತವು ಕರ್ನಾಟಕ ರಾಜ್ಯದ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನಲ್ಲಿ ಇರುವ ಜಲಪಾತವಾಗಿದೆ. ಭರಚುಕ್ಕಿ ಕಾವೇರಿ ನದಿಯ ದಡದಲ್ಲಿರುವ ಶಿವನಸಮುದ್ರ ದ್ವೀಪದ ಸುತ್ತ ಹರಿದು ಬೆರಗುಗೊಳಿಸುವ ಒಂದು ಜಲಪಾತವಾಗಿದೆ. ಶಿವನಸಮುದ್ರ ದ್ವೀಪದ ಸುತ್ತಲೂ ಹರಿಯುವ ಕಾವೇರಿ ನದಿಯು, ಎರಡು ಕವಲುಗಳಾಗಿ ವಿಭಜನೆಗೊಳ್ಳುತ್ತದೆ. ಹೀಗೆ ವಿಭಜನೆಗೊಂಡ ಕಾವೇರಿ ನದಿಯು, ಬಲ ಭಾಗಕ್ಕೆ ಹರಿದು 69 ಮೀಟರ್ ಎತ್ತರದಿಂದ ಎತ್ತರದಿಂದ ಕೆಳಗೆ ಧುಮ್ಮಿಕುವ ಜಲಪಾತವೇ ಈ ಭರಚುಕ್ಕಿ ಜಲಪಾತವಾಗಿದೆ. ಅವಳಿ ಜಲಪಾತಗಳಾದ ಭರಚುಕ್ಕಿ ಮತ್ತು ಗಗನಚುಕ್ಕಿ ಇಲ್ಲಿನ ಗಮನ ಸೆಳೆಯುತ್ತದೆ. ಈ ಜಲಪಾತಕ್ಕೆ ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಭೇಟಿ ನೀಡಲು ಉತ್ತಮ ಸಮಯ. ವರ್ಷದ ಎಲ್ಲಾ ಕಾಲದಲ್ಲೂ ಈ ಸ್ಥಳಕ್ಕೆ ಭೇಟಿ ನೀಡಬಹುದು.
ಶಿವನಸಮುದ್ರ ಭರಚುಕ್ಕಿ ಜಲಪಾತದ ದೂರಗಳು
- ಬೆಂಗಳೂರು – 131 ಕಿ.ಮೀ
- ಚಾಮರಾಜನಗರ – 60 ಕಿ.ಮೀ
- ಮೈಸೂರು – 70 ಕಿ.ಮೀ
- ಕೊಳ್ಳೇಗಾಲ – 24 ಕಿ.ಮೀ
- ಚಾಮರಾಜನಗರ ರೈಲ್ವೆ ನಿಲ್ದಾಣ – 60 ಕಿ.ಮೀ
- ಮೈಸೂರು ವಿಮಾನ ನಿಲ್ದಾಣ – 78 ಕಿ.ಮೀ
ಈ ಜಲಪಾತಗಳ ಬಗ್ಗೆ ಸಾಮಾನ್ಯ ಕಲ್ಪನೆಯೆಂದರೆ ಎಡಭಾಗವನ್ನು ಗಗನಚುಕ್ಕಿ ಮತ್ತು ಬಲಭಾಗವನ್ನು ಭರಚುಕ್ಕಿ ಎಂದು ಕರೆಯಲಾಗುತ್ತದೆ. ವಾಸ್ತವದಲ್ಲಿ ಭರಚುಕ್ಕಿ ಜಲಪಾತವು ಗಗನಚುಕ್ಕಿ ಜಲಪಾತದ ನೈಋತ್ಯಕ್ಕೆ ಕೆಲವು ಕಿ.ಮೀ ದೂರದಲ್ಲಿದೆ. ಧುಮ್ಮಿಕ್ಕುವ ಹರಿಯುವ ಭರಚುಕ್ಕಿ ಜಲಪಾತದ ನೋಟ ರುದ್ರರಮಣೀಯವಾಗಿ ನಿಮ್ಮನ್ನು ವಿಸ್ಮಯಗೊಳಿಸುತ್ತವೆ.
1902 ರಲ್ಲಿ ಏಷ್ಯಾದ ಮೊದಲ ಜಲವಿದ್ಯುತ್ ಉತ್ಪಾದನಾ ಕೇಂದ್ರವನ್ನು ಶಿವನಸಮುದ್ರದಲ್ಲಿ ಪ್ರಾರಂಭಿಸಲಾಯಿತು. ಈ ಯೋಜನೆಯನ್ನು ಮೈಸೂರು ಸಾಮ್ರಾಜ್ಯದ ದಿವಾನ್ ಶೇಷಾದ್ರಿ ಅಯ್ಯರ್ ಸ್ಥಾಪಿಸಿದರು.
ಕಾವೇರಿ ವನ್ಯಜೀವಿ ಅಭಯಾರಣ್ಯದ ದಟ್ಟವಾದ ಕಾಡುಗಳಿಂದ ಸುತ್ತುವರೆದಿರುವ ಸಾಟಿಯಿಲ್ಲದ ಸೌಂದರ್ಯದೊಂದಿಗೆ ಅದ್ಭುತವಾದ ಜಲಪಾತಗಳು ಪ್ರಶಾಂತತೆಯಲ್ಲಿ ಸಮಯ ಕಳೆಯಲು ಸೂಕ್ತವಾದ ಸ್ಥಳವಾಗಿದೆ ಮತ್ತು ಇದು ಪರಿಪೂರ್ಣ ಪಿಕ್ನಿಕ್ ತಾಣವಾಗಿದೆ. ಜಲಪಾತಗಳು ವಿಶ್ವದ ಅತ್ಯುತ್ತಮ ಜಲಪಾತಗಳಲ್ಲಿ ಒಂದಾಗಿದೆ ಮತ್ತು ವೀಕ್ಷಣೆಗೆ ಆಕರ್ಷಕ ಮತ್ತು ಅದ್ಭುತವಾಗಿವೆ.
ಭೇಟಿ ನೀಡಿ





