ಅಬ್ಬಿಗುಂಡಿ ಅಣೆಕಟ್ಟು

ಅಬ್ಬಿಗುಂಡಿ ಅಣೆಕಟ್ಟು ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ (ನರಸಿಂಹರಾಜಪುರ) ತಾಲ್ಲೂಕಿನ ಸೀತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗರಮಕ್ಕಿ ಗ್ರಾಮದ ಸಮೀಪದಲ್ಲಿರುವ ಒಂದು ಸಣ್ಣ ತಡೆ ಅಣೆಕಟ್ಟಾಗಿದೆ (ಚೆಕ್ ಡ್ಯಾಮ್). ಇದು ಕೊಪ್ಪ ಮತ್ತು ನರಸಿಂಹರಾಜಪುರ (ಎನ್.ಆರ್.ಪುರ) ಪಟ್ಟಣಗಳ ಸಮೀಪದಲ್ಲಿದ್ದು, ರಮಣೀಯವಾದ ನೈಸರ್ಗಿಕ ಪರಿಸರದಲ್ಲಿ ನೆಲೆಗೊಂಡಿದೆ. ಅಣೆಕಟ್ಟಿನ ಹೆಚ್ಚುವರಿ ನೀರು ಹರಿಯುವ ತಡೆಗೋಡೆಯು ಇಲ್ಲಿನ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಈ ಅಣೆಕಟ್ಟು ನಾಗರಮಕ್ಕಿ ಗ್ರಾಮದಿಂದ ಸುಮಾರು 2 ಕಿ.ಮೀ ದೂರದಲ್ಲಿದೆ

ಅಬ್ಬಿಗುಂಡಿ ಅಣೆಕಟ್ಟಿನ ದೂರಗಳು

  • ಬೆಂಗಳೂರು – 315 ಕಿ.ಮೀ
  • ಚಿಕ್ಕಮಗಳೂರು – 86 ಕಿ.ಮೀ
  • ಎನ್.ಆರ್.ಪುರ – 16 ಕಿ.ಮೀ
  • ತರೀಕೆರೆ ರೈಲ್ವೆ ನಿಲ್ದಾಣ – 62 ಕಿ.ಮೀ
  • ಶಿವಮೊಗ್ಗ ವಿಮಾನ ನಿಲ್ದಾಣ – 56 ಕಿ.ಮೀ