ದುರ್ಗದಹಳ್ಳಿ ಶ್ರೀ ಕಾಲಭೈರವೇಶ್ವರ ದೇವಾಲಯವು ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ದುರ್ಗದಹಳ್ಳಿ ಗ್ರಾಮದ ಸಮೀಪದಲ್ಲಿರುವ ಪುರಾತನ ಹಿಂದೂ ದೇವಾಲಯವಾಗಿದೆ. ದುರ್ಗದಹಳ್ಳಿ ಗ್ರಾಮದಿಂದ ಬಲ್ಲಾಳರಾಯನ ದುರ್ಗ ಕೋಟೆ ಮತ್ತು ರಾಣಿ ಝರಿಗೆ ತೆರಳುವ ಮಾರ್ಗಮಧ್ಯೆ ಈ ದೇವಾಲಯವು ಸಿಗುತ್ತದೆ.

ದುರ್ಗದಹಳ್ಳಿ ಶ್ರೀ ಕಾಲಭೈರವೇಶ್ವರ ದೇವಾಲಯದ ದೂರಗಳು
- ಬೆಂಗಳೂರು – 282 ಕಿ.ಮೀ
- ಚಿಕ್ಕಮಗಳೂರು – 70 ಕಿ.ಮೀ
- ಮೂಡಿಗೆರೆ– 40 ಕಿ.ಮೀ
- ಸಕಲೇಶಪುರ ರೈಲ್ವೆ ನಿಲ್ದಾಣ – 74 ಕಿ.ಮೀ
ಶ್ರೀ ಕಾಲಭೈರವೇಶ್ವರನಿಗೆ ಸಮರ್ಪಿತವಾಗಿರುವ ಈ ಪುರಾತನ ದೇವಾಲಯವು ಬಲ್ಲಾಳರಾಯನ ದುರ್ಗದ ಮೇಲ್ಭಾಗದಲ್ಲಿ, ದಟ್ಟ ಅರಣ್ಯದ ನಡುವೆ ಸುಂದರವಾದ ನೈಸರ್ಗಿಕ ಪರಿಸರದಲ್ಲಿ ನೆಲೆಗೊಂಡಿದೆ. ದೇವಾಲಯದ ಸುತ್ತಲಿನ ಹಸಿರು ಪರಿಸರ ಹಾಗೂ ಪ್ರಶಾಂತ ವಾತಾವರಣವು ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರಿಗೆ ವಿಶೇಷ ಅನುಭವವನ್ನು ನೀಡುತ್ತದೆ.





