ಕಪ್ಪತಗುಡ್ಡವು ಕರ್ನಾಟಕ ರಾಜ್ಯದ ಗದಗ ಜಿಲ್ಲೆಯಲ್ಲಿ ಇದೆ. ಇದು ಏಷ್ಯಾ ಖಂಡದಲ್ಲಿಯೇ ಶುದ್ಧವಾದ ಗಾಳಿಗೆ ಪ್ರಸಿದ್ದಿ ಪಡೆದಿದೆ. ಉತ್ತರ ಕರ್ನಾಟಕದಲ್ಲಿರುವ ಈ ಕಪ್ಪತ್ತಗುಡ್ಡವನ್ನು ವನ್ಯಜೀವಿಧಾಮ ಎಂದು ಘೋಷಣೆ ಮಾಡಲಾಗಿದೆ. ಮುಂಗಾರು ಅವಧಿಯಲ್ಲಿ ಕಪ್ಪತಗುಡ್ಡ ಇನ್ನಷ್ಟು ಆಕರ್ಷಕವಾಗಿ ಕಾಣಲಿದ್ದು, ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ.
ಕಪ್ಪತಗುಡ್ಡವು ಬೆಂಗಳೂರಿನಿಂದ 361 ಕಿಮೀ ಮತ್ತು ಗದಗ ನಗರದಿಂದ 30 ಕಿಮೀ ದೂರದಲ್ಲಿದೆ.
ವಯಸ್ಕರಿಗೆ ಪ್ರವೇಶ ಶುಲ್ಕ Rs.25/- ಮತ್ತು ಮಕ್ಕಳಿಗೆ (7 ರಿಂದ 14 ವರ್ಷ) Rs.10/- ಪ್ರವೇಶ ಶುಲ್ಕವಿದೆ. ಸ್ಟಿಲ್ ಕ್ಯಾಮರಾ (200 ಎಂಎಂ ಲೆನ್ಸ್ ಬಿಲೋ) Rs.100/- ಮತ್ತು ಸ್ಟಿಲ್ ಕ್ಯಾಮರಾ (200 ಎಂಎಂ ಲೆನ್ಸ್ ಎಬೋ) Rs.200/- ಶುಲ್ಕವಿದೆ. ವಿಡಿಯೋಗ್ರಫಿಗೆ (ಮುಂಚಿತವಾಗಿ ಪರವಾನಿಗೆ ಪಡೆಯಬೇಕು) ಶುಲ್ಕ Rs.500/- ಆಗಿದೆ.
ಕಪ್ಪತಗುಡ್ಡಕ್ಕೆ ಆಗಮಿಸುವ ದ್ವಿಚಕ್ರ ವಾಹನ ಸವಾರರು Rs.50/- ರೂ. ಶುಲ್ಕ ಹಾಗೂ ಲಘು ವಾಹನ (ಕಾರು, ಜೀಪ್) Rs.100/- ರೂ. ಶುಲ್ಕವನ್ನು ಪಾವತಿ ಮಾಡಬೇಕು.
ಕಪ್ಪತಗುಡ್ಡವು ಖನಿಜ ನಿಕ್ಷೇಪಗಳು ಸುರಕ್ಷಿತವಾಗಿವೆ. ಈ ಗುಡ್ಡವು ಗದಗ ತಾಲೂಕಿನ ಬಿಂಕದಕಟ್ಟಯಿಂದ ಮುಂಡರಗಿ ತಾಲೂಕಿನ ಶಿಂಗಟಾಲೂರು ತನಕ ಮೂರು ತಾಲೂಕುಗಳ ವ್ಯಾಪ್ತಿಯಲ್ಲಿ ಸುಮಾರು 65 ಕಿ. ಮೀ. ಪ್ರದೇಶದಲ್ಲಿ ಕಪ್ಪತ್ತಗುಡ್ಡ ಹರಡಿಕೊಂಡಿದೆ.
ಭೇಟಿ ನೀಡಿ