ಕಪ್ಪತಗುಡ್ಡ

ಕಪ್ಪತಗುಡ್ಡವು ಕರ್ನಾಟಕ ರಾಜ್ಯದ ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನಲ್ಲಿ ಇರುವ ಸುಂದರವಾದ ಬೆಟ್ಟಗಳ ಶ್ರೇಣಿಯಾಗಿದೆ. ಇದು ಉತ್ತರ ಕರ್ನಾಟಕದ ಪ್ರಮುಖ ನೈಸರ್ಗಿಕ ತಾಣಗಳಲ್ಲಿ ಒಂದಾಗಿದ್ದು, ತನ್ನ ಹಸಿರು ಪರಿಸರ, ಸಮೃದ್ಧ ಜೀವವೈವಿಧ್ಯ ಹಾಗೂ ಸ್ವಚ್ಛ ವಾತಾವರಣಕ್ಕೆ ಪ್ರಸಿದ್ಧವಾಗಿದೆ. ಕಪ್ಪತಗುಡ್ಡವನ್ನು ವನ್ಯಜೀವಿ ಅಭಯಾರಣ್ಯವಾಗಿ ಘೋಷಿಸಲಾಗಿದೆ.

ಕಪ್ಪತಗುಡ್ಡದ ದೂರಗಳು

  • ಬೆಂಗಳೂರು – 373 ಕಿ.ಮೀ
  • ಗದಗ – 30 ಕಿ.ಮೀ
  • ಮುಂಡರಗಿ – 34 ಕಿ.ಮೀ
  • ಗದಗ ಬೈಪಾಸ್ ರೈಲ್ವೆ ನಿಲ್ದಾಣ – 35 ಕಿ.ಮೀ

ಕಪ್ಪತಗುಡ್ಡಕ್ಕೆ ಭೇಟಿ ನೀಡುವ ದ್ವಿಚಕ್ರ ವಾಹನಗಳಿಗೆ ₹50 ಹಾಗೂ ಲಘು ವಾಹನಗಳಿಗೆ (ಕಾರು, ಜೀಪ್ ಇತ್ಯಾದಿ) ₹100 ಪ್ರವೇಶ ಶುಲ್ಕ ವಿಧಿಸಲಾಗುತ್ತದೆ.

ಕಪ್ಪತಗುಡ್ಡವು ಸಮೃದ್ಧ ಖನಿಜ ನಿಕ್ಷೇಪಗಳನ್ನು ಹೊಂದಿರುವ ಪ್ರದೇಶವಾಗಿದ್ದು, ಅವುಗಳ ಸಂರಕ್ಷಣೆಗೆ ವಿಶೇಷ ಮಹತ್ವ ನೀಡಲಾಗಿದೆ. ಈ ಬೆಟ್ಟದ ಶ್ರೇಣಿಯು ಗದಗ ತಾಲೂಕಿನ ಬಿಂಕದಕಟ್ಟಿಯಿಂದ ಮುಂಡರಗಿ ತಾಲೂಕಿನ ಶಿಂಗಟಾಲೂರುವರೆಗೆ ವಿಸ್ತರಿಸಿಕೊಂಡಿದ್ದು, ಗದಗ, ಮುಂಡರಗಿ ಮತ್ತು ರೋಣ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಸುಮಾರು 65 ಕಿಲೋಮೀಟರ್ ಉದ್ದಕ್ಕೆ ಹರಡಿಕೊಂಡಿದೆ.

ಮುಂಗಾರು ಕಾಲದಲ್ಲಿ ಕಪ್ಪತಗುಡ್ಡವು ಹಚ್ಚಹಸಿರಿನಿಂದ ಕಂಗೊಳಿಸಿ ಇನ್ನಷ್ಟು ಮನೋಹರವಾಗಿ ಕಾಣುತ್ತದೆ. ಈ ಸಮಯದಲ್ಲಿ ಇಲ್ಲಿನ ನೈಸರ್ಗಿಕ ಸೌಂದರ್ಯವು ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತದೆ.

ಭೇಟಿ ನೀಡಿ
ಮುಂಡರಗಿ ತಾಲ್ಲೂಕಿನ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಗದಗ ಜಿಲ್ಲೆಯ ಇತರೆ ತಾಲ್ಲೂಕು ಪ್ರವಾಸಿ ಸ್ಥಳಗಳು


Responsive Services Section