ಶೆಟ್ಟಿಹಳ್ಳಿ ರೋಸರಿ ಚರ್ಚ್ ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯಲ್ಲಿ ಇದೆ. ಈ ಚರ್ಚನ್ನು ಫ್ರೆಂಚ್ ಮಿಷನರಿಗಳು 1860ರ ದಶಕದಲ್ಲಿ ನಿರ್ಮಿಸಿದರು. 1979ರಲ್ಲಿ ಹೇಮಾವತಿ ಅಣೆಕಟ್ಟು ಮತ್ತು ಜಲಾಶಯದ ನಿರ್ಮಾಣದಿಂದ ಈ ಚರ್ಚ್ ನೀರಿನಲ್ಲಿ ಮುಳುಗಡೆಯಾಯಿತು. ಅದರ ನಂತರ ಈ ಸ್ಥಳವು ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಈ ಚರ್ಚನ್ನು ‘ಮುಳುಗಿದ ಚರ್ಚ್’ ಅಥವಾ ‘ತೇಲುವ ಚರ್ಚ್’ ಎಂದು ಕರೆಯಲಾಗುತ್ತದೆ.
ಈ ಚರ್ಚ್ ಬೆಂಗಳೂರಿನಿಂದ 253 ಕಿ.ಮೀ, ಹಾಸನ ನಗರದಿಂದ 21 ಕಿ.ಮೀ ಹಾಗೂ ಹಾಸನ ರೈಲ್ವೆ ನಿಲ್ದಾಣದಿಂದ 22 ಕಿ.ಮೀ ದೂರದಲ್ಲಿದೆ.
ಇತಿಹಾಸ
ಈ ಚರ್ಚನ್ನು ಶ್ರೀಮಂತ ಬ್ರಿಟಿಷ್ ಎಸ್ಟೇಟ್ ಮಾಲೀಕರಿಗಾಗಿ ಫ್ರೆಂಚ್ ಮಿಷನರಿಗಳು 1860ರಲ್ಲಿ ನಿರ್ಮಿಸಿದರು. ನಂತರ ಹೇಮಾವತಿ ಅಣೆಕಟ್ಟು ಮತ್ತು ಜಲಾಶಯ ನಿರ್ಮಾಣದ ಕಾರಣದಿಂದ ಈ ಚರ್ಚು ತೊರೆಯಲ್ಪಟ್ಟು ನೀರಿನಲ್ಲಿ ಮುಳುಗಿತು. ಈ ಚರ್ಚು ಗೋಥಿಕ್ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಾಣಗೊಂಡಿದೆ.
ಭೇಟಿ ನೀಡಿ









