ದೊಡ್ಡ ಹುಣಸೆ ಮರವು ಕರ್ನಾಟಕ ರಾಜ್ಯದ ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದ ಕಲ್ಮಠ ಎಂಬ ಹಳ್ಳಿಯಲ್ಲಿ ಇದೆ. ಈ ಮರಗಳ ವಯಸ್ಸು ಸುಮಾರು ೪೦೦೦ ವರ್ಷಗಳು ಎಂದು ಅಂದಾಜಿಸಲಾಗುತ್ತದೆ.
ಈ ಸ್ಥಳವು ಬೆಂಗಳೂರಿನಿಂದ 476 ಕಿ.ಮೀ ಮತ್ತು ಹಾವೇರಿ ನಗರದಿಂದ ಸುಮಾರು 29 ಕಿ.ಮೀ ದೂರದಲ್ಲಿದೆ. ಹಾಗೂ ಹಾವೇರಿ ರೈಲ್ವೆ ನಿಲ್ದಾಣದಿಂದ 30 ಕಿ.ಮೀ ದೂರದಲ್ಲಿದೆ.
ಹಾವೇರಿ ಜಿಲ್ಲೆಯ ಸವಣೂರು ಹಿಂದೆ ನವಾಬರಿಂದ ಹೆಚ್ಚು ಕಾಲ ಆಳ್ವಿಕೆಗೆ ಒಳಪಟ್ಟ ಪ್ರದೇಶ. ಈಗ ಸವಣೂರು ಹೆಚ್ಚು ಪ್ರಚಲಿತದಲ್ಲಿ ಇರುವುದು ದೊಡ್ಡ ಹುಣಸೆ ಮರಗಳಿಂದ, ಇಲ್ಲಿ 03 ದೊಡ್ಡ ಗಾತ್ರದ ಹುಣಸೆ ಮರಗಳಿವೆ. ಈ 03 ಮರಗಳು ತಮ್ಮ ಬೃಹತ್ ಆಕಾರದಿಂದ ಗಮನ ಸೆಳೆದಿದ್ದರಿಂದ ರಾಜ ಋಕ್ಷ ಅಥವಾ ದೊಡ್ಡ ಹುಣಸೆ ಮರ ಎಂದು ಕರೆಯುತ್ತಾರೆ. ಈ ಹುಣಸೆ ಮರಗಳು ಬಾಂಬು ಕೇಸಿಯ ಎಂಬ ಸಸ್ಯ ವರ್ಗಕ್ಕೆ ಸೇರಿವೆ.
ಭೇಟಿ ನೀಡಿ











