ಹಾನಗಲ್ ಪುರಾತನ ವೀರಭದ್ರ ದೇವಾಲಯ

ಹಾನಗಲ್ ಪುರಾತನ ವೀರಭದ್ರ ದೇವಸ್ಥಾನವು ಕರ್ನಾಟಕ ರಾಜ್ಯದ ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನಲ್ಲಿರುವ ಇರುವ ಹಾನಗಲ್‌ನ ಕೋಟೆ ಪ್ರದೇಶದಲ್ಲಿ ಚಾಲುಕ್ಯರ ಕಾಲದ ದೇವಾಲಯವಾಗಿದೆ. ಸರಳವಾದ ಯೋಜನೆಯಾಗಿದ್ದರೂ, ಪಾಶ್ಚಾತ್ಯ ಚಾಲುಕ್ಯ ವಾಸ್ತುಶಿಲ್ಪದ ಭವ್ಯತೆಯು ಚಾಲು ತಿರುಗಿದ ಕಂಬಗಳು ಮತ್ತು ಹೊರಗೋಡೆಗಳ ಮೇಲೆ ವಿಸ್ತಾರವಾಗಿ ಕೆತ್ತಿದ ಕೀರ್ತಿಮುಖಗಳ ಮೂಲಕ ಸ್ಪಷ್ಟವಾಗಿ ಕಂಡುಬರುತ್ತದೆ.

ಈ ದೇವಾಲಯವು ಬೆಂಗಳೂರಿನಿಂದ ಸುಮಾರು 371 ಕಿ.ಮೀ ಮತ್ತು ಹುಬ್ಬಳಿಯಿಂದ 74 ಕಿ.ಮೀ ದೂರದಲ್ಲಿದೆ. ಹಾಗೂ ಹಾವೇರಿ ನಗರದಿಂದ 34 ಕಿ.ಮೀ ಮತ್ತು ಹಾವೇರಿ ರೈಲ್ವೆ ನಿಲ್ದಾಣದಿಂದ 35 ಕಿ.ಮೀ ದೂರದಲ್ಲಿದೆ.

ವಾಸ್ತುಶಿಲ್ಪ

ಪೂರ್ವಾಭಿಮುಖವಾಗಿರುವ ವೀರಭದ್ರ ದೇವಾಲಯವು ತಳವಿನ್ಯಾಸದಲ್ಲಿ ಗರ್ಭಗೃಹ, ಅಂತರಾಳ ಮತ್ತು ನವರಂಗದಿಂದ ಕೂಡಿದ್ದು ಮೂರು ಮುಖಮುಂಟಪಗಳವೆ. ಗರ್ಭಗೃಹದಲ್ಲಿ ಪೀಠದ ಮೇಲೆ ಶಿವ ಲಿಂಗವಿದೆ. ಗರ್ಭಗೃಹದ ಬಾಗಿಲುವಾಡದ ಲಲಾಟ ಬಿಂಬವು ಗಜಲಕ್ಷ್ಮೀ ಶಿಲ್ಪದಿಂದ ಕೂಡಿದೆ. ಅರ್ಧಮಂಟಪದ ಮಧ್ಯಭಾಗದಲ್ಲಿ ನಂದಿಯ ಮೂರ್ತಿಯಿದೆ. ನವರಂಗವು ನಾಲ್ಕು ನಯಗೊಳಿಸಿದ ಕಂಭಗಳಿಂದ ನಿರ್ಮಿಸಲ್ಪಟ್ಟಿದೆ. ದೇವಾಲಯದ ಹೊರಗೋಡೆಗಳು ಅರ್ಧಕಂಬಗಳಿಂದ ಅಲಂಕೃತಗೊಂಡಿದ್ದು ಸಣ್ಣ ಗಾತ್ರದ ಶಿಖರಗಳಿಂದ ಕೂಡಿದೆ.

ಹಾನಗಲ್ ಕದಂಬರ ಒಂದು ಶಾಖೆಯ ರಾಜಧಾನಿಯಾಗಿತ್ತು. ಕ್ತಿ. ಶ. 1068 ರಿಂದ 1203 ರವರೆಗೆ ಆಳಿದ ಹಾನಗಲ್ ಕದಂಬ ಮನೆತನದ ರಾಜರು ಬಹಳ ಕಾಲ ಕಲ್ಯಾಣದ ಚಾಳುಕ್ಯರ ಮಾಂಚಲಕರಾಗಿ ಈ ಊರಲ್ಲಿ ರಾಜ್ಯಭಾರ ಮಾಡುತ್ತಿದ್ದರು. ಹೊಯ್ಸಳ ವೀರಬಲ್ಲಾಳನ ಕ್ರಿ.ಶ. 1197 ರಲ್ಲಿ ಕದಂಬ ಕಾಮದೇವನ ಕಾಲಕ್ಕೆ ಹಾನಗಲ್‌ ಮೇಲೆ ದಾಳಿ ಮಾಡಿ ಇಲ್ಲಿಯ ಆನೆಯ ಕರೆಯ ಹತ್ತಿರ ಬೀಡದ್ದನೆಂದು ತಿಳಿದು ಬರುತ್ತದೆ. ನಂತರ ಕೆಲ ಕಾಲ ಹಾನಗಲು ಹೊಯ್ಸಳರ ಆಧಿಪತ್ಯಕ್ಕೆ ಒಳ್ಳಪಟ್ಟಿತು.

ಭೇಟಿ ನೀಡಿ
ಹಾನಗಲ್ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಹಾವೇರಿ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section